National News : ದೆಹಲಿಯ ಪರಿಷ್ಕೃತ ಪ್ರಗತಿ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಬುಧವಾರ ಜುಲೈ 26 ರಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಎತ್ತರಕ್ಕೆ ಏರಿದರೆ ನೀವು ಆಕಾಶವನ್ನು ತಲುಪುತ್ತೀರಿ. ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಭಾರತದಲ್ಲಿ ಮೂಲಸೌಕರ್ಯಗಳು ಬದಲಾಗುತ್ತಿವೆ.
ವಿಶ್ವದ ಅತಿ ಎತ್ತರದ ರೈಲು ಸೇತುವೆ, ಅತಿ ಉದ್ದದ ಸುರಂಗ, ಅತ್ಯಂತ ದೊಡ್ಡ ಸ್ಟೇಡಿಯಮ್, ಅತಿ ಉದ್ದದ ಮೋಟಾರು ರಸ್ತೆ ಹಾಗೂ ಅತಿ ಎತ್ತರದ ಪ್ರತಿಮೆ ಭಾರತದಲ್ಲಿದೆ. ಅದರೊಂದಿಗೆ ಆರ್ಥಿಕವಾಗಿ ಬಹಳ ವೇಗವಾಗಿ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.
ನಮ್ಮ ಮೊದಲ ಅವಧಿಯಲ್ಲಿ ಆರ್ಥಿಕತೆಯ ವಿಷಯದಲ್ಲಿ ಭಾರತವು 10ನೇ ಸ್ಥಾನದಲ್ಲಿತ್ತು. ಎರಡನೇ ಅವಧಿಯಲ್ಲಿ ಇದು ವಿಶ್ವದ ಐದನೇ ಆರ್ಥಿಕತೆಯ ದೇಶವಾಗಿದೆ. ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ದೇಶವೇ ನಂಬುವಂತೆ ನನ್ನ ಮೂರನೇ ಅವಧಿಯಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಮೂರು ಅಗ್ರಸ್ಥಾನಗಳಲ್ಲಿ ಒಂದಾಗಿರುತ್ತದೆ. ಇದು ಮೋದಿ ನಿಮಗೆ ನೀಡುತ್ತಿರುವ ಗ್ಯಾರಂಟಿ ಎಂದು ಹೇಳಿದರು.
Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ