ಬೆಂಗಳೂರು: ಪ್ರಧಾನಿ ಮೋದಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ವಾರದಲ್ಲಿ ಆರು ದಿನ ರೈಲು ಸಂಚರಿಸಲಿದ್ದು, ಬೆಳಗ್ಗೆ 5.50ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟು ಬೆಂಗಳೂರಿನ ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬರುತ್ತದೆ ನಂತರ 12.30ಕ್ಕೆ ಮೈಸೂರಿನಲ್ಲಿ ನಿಲುಗಡೆಯಾಗುತ್ತದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಧಾನಿ ಮೋದಿಯವರನ್ನು ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸ್ವಾಗತಿಸಿದರು.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ
ವಂದೇ ಭಾರತ್ ರೈಲು ಪೆರಂಬೂರು, ವೆಪ್ಪಂಪಟ್ಟು, ಕಟ್ಟಾಡಿ ಜಂಕ್ಷನ್, ಗುಡುಪಲ್ಲಿ ಮಾಲೂರಿನ ಮುಖಾಂತರ ಹಾದು ಹೋಗುತ್ತದೆ. ರೈಲು ಎರಡು ವಿಭಾಗಗಳನ್ನು ಹೊಂದಿದ್ದು, ಸುಸಜ್ಜಿತವಾಗಿ ತಯಾರು ಮಾಡಲಾಗಿದೆ ಒಂದು ಎಕ್ಸಿಕ್ಯುಟಿವ್ ಕ್ಲಾಸ್ ಇನ್ನೊಂದು ಎಕಾನಮಿ ಕ್ಲಾಸ್. ಎಕ್ಸ್ ಪ್ರೆಸ್ ರೈಲು ಬುಧವಾರ ಹೊರತುಪಡಿಸಿ ವಾರದ 6 ದಿನಗಳೂ ಸಂಚರಿಸಲಿದೆ. 1,128 ಪ್ರಯಾಣಿಕರಿಗೆ ಆಸನ ಸಾಮರ್ಥ್ಯವಿದ್ದು, ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ 16 ಕೋಚ್ ಗಳನ್ನು ಹೊಂದಿದೆ.