ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ್ ಕುರಿತು ಮಾತನಾಡುತ್ತಿದ್ದಾರೆ. ಪಹಲ್ಗಾಮ್ ದಾಳಿಗೆ ಆಪರೇಷನ್ ಮಹಾದೇವ್ ಸೇಡು ತೀರಿಸಿಕೊಂಡಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ಕುರಿತು ಎರಡು ದಿನಗಳ ಚರ್ಚೆಯನ್ನು ಉದ್ದೇಶಿಸಿ ಮಂಗಳವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಟುವಾದ ಪ್ರತಿಕ್ರಿಯೆ ನೀಡಿದರು.
ಸಶಸ್ತ್ರ ಪಡೆಗಳ ತ್ವರಿತ ಮತ್ತು ನಿರ್ಣಾಯಕ ಕ್ರಮಕ್ಕಾಗಿ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ರಾಜಕೀಯ ಲಾಭಕ್ಕಾಗಿ ಭಾರತದ ನೈತಿಕತೆಯನ್ನು ಕುಗ್ಗಿಸುತ್ತಿದೆ ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಆರೋಪಿಸಿದರು. ಆಪರೇಷನ್ ಸಿಂಧೂರ್ ನಿಂದ ಹಿಡಿದು ಆಪರೇಷನ್ ಮಹಾದೇವ್ ವರೆಗೂ ಪ್ರಧಾನಿ ಮೋದಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮೋದಿ ಕೊಟ್ಟ 10 ಸಂದೇಶಗಳು :
೧. ಏಪ್ರಿಲ್ 22 ರಂದು 22 ನಿಮಿಷಗಳಲ್ಲಿ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಳ್ಳಲಾಗಿದೆ
೨. ಪಾಕಿಸ್ತಾನದ ಹಲವು ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ
೩. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ಕೇವಲ ಮೂರು ದೇಶಗಳು ಮಾತ್ರ ಬೆಂಬಲ ನೀಡಿದ್ದವು
೪. ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಭಾರತಕ್ಕೆ ಯಾವುದೇ ವಿಶ್ವ ನಾಯಕರ ಸೂಚನೆ ನೀಡಿಲ್ಲ.
೫. ಬಸ್ ಕರೋ, ಬಹುತ್ ಮಾರಾ ಹೈ’, ಆಪ್ ಸಿಂಧೂರ್ ನಂತರ ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿದೆ.
೬. ಪಾಕಿಸ್ತಾನ ದಾಳಿ ಮಾಡಿದರೆ ಗುಂಡುಗಳಿಗೆ ಬಾಂಬ್‌ಗಳ ಮೂಲಕ ಪ್ರತಿಕ್ರಿಯಿಸುತ್ತೇವೆ. ಅಮೆರಿಕ ಉಪಾಧ್ಯಕ್ಷರಿಗೆ ಪ್ರಧಾನಿ ಮೋದಿ ಹೇಳಿಕೆ
೭. ಆಪರೇಷನ್ ಸಿಂಧೂರ್ ಇನ್ನೂ ಸಕ್ರಿಯವಾಗಿದೆ
೮ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿರುವ ಕಾಂಗ್ರೆಸ್, ಆಪರೇಷನ್ ಸಿಂಧೂರ್ ಅನ್ನು ‘ತಮಾಷಾ’ ಎಂದು ಕರೆದಿದೆ
೯. ಸೇನಾ ಸಭೆಯ ಸಮಯದಲ್ಲಿ ಅಮೆರಿಕದ ಉಪಾಧ್ಯಕ್ಷರ ಕರೆಯನ್ನು ನಿರ್ಲಕ್ಷಿಸಲಾಗಿದೆ.
೧೦. ಪಿಒಕೆ, ಸಿಂಧೂ ಜಲ ಒಪ್ಪಂದ ನೆಹರೂ ಅವರ ‘ಅತಿದೊಡ್ಡ ಪ್ರಮಾದ’
ಹೀಗೆ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಕದನ ವಿರಾಮ ಮಧ್ಯಸ್ಥಿಕೆ ಹೇಳಿಕೆಗೆ ಸಂಬಂಧಿಸಿದಂತೆ ಟ್ರಂಪ್ ಅವರನ್ನು ಸುಳ್ಳುಗಾರ ಎಂದು ಕರೆಯಲು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. ಇನ್ನು ಮಂಗಳವಾರ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಮೋದಿ ಹಾಗು ಅಮಿತ್ ಶಾ ಶ್ಲಾಘಿಸಿದ್ದಾರೆ. ಆಪರೇಷನ್ ಮಹಾದೇವ್ ಮತ್ತು ಆಪರೇಷನ್ ಸಿಂಧೂರ್ ಕುರಿತು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ