ಅಮೆರಿಕದಲ್ಲಿ ಮೋದಿಯ ”ಕಿಸಾನ್ ಸಮ್ಮಾನ್ ನಿಧಿ’’

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ‘ಕಿಸಾನ್ ಸಮ್ಮಾನ್ ನಿಧಿ’ ಮಾದರಿಯಲ್ಲಿ, ತಮ್ಮ ದೇಶದ ರೈತರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ವಿದೇಶಿ ಉತ್ಪನ್ನಗಳ ಮೇಲೆ ವಿಧಿಸಿರುವ ಹೊಸ ತೆರಿಗೆಗಳಿಂದ ಅಮೆರಿಕಕ್ಕೆ ಹರಿದುಬರುತ್ತಿರುವ ಭಾರೀ ಆದಾಯದಿಂದ ಈ ನೆರವು ನೀಡಲಾಗುತ್ತಿದೆ.

ಟ್ರಂಪ್ ಸರ್ಕಾರ ಇತ್ತೀಚೆಗೆ ಹಲವು ರಾಷ್ಟ್ರಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಿತ್ತು. ಇದರ ಪರಿಣಾಮವಾಗಿ ಸರ್ಕಾರಕ್ಕೆ ಲಭಿಸಿದ ಮೊತ್ತದಲ್ಲಿ ಮೊದಲ ಹಂತವಾಗಿ 1 ಲಕ್ಷ ಕೋಟಿ ರೂ. ಸಮಬಾಳುವ ನಿಧಿಯನ್ನು ರೈತರಿಗೆ ನೀಡುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಇದರ ಜೊತೆಗೆ, ಅಮೆರಿಕ ತೆರಿಗೆಗಳಿಗೆ ಪ್ರತಿಯಾಗಿ ಚೀನಾ ತನ್ನ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಮೆರಿಕದ ಸೋಯಾಬೀನ್, ಗೋಧಿ, ಜೋಳ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳ ಮೇಲೆ ಪ್ರತಿತೆರಿಗೆ ವಿಧಿಸಿದೆ. ಇದರಿಂದ ಚೀನಾದ ಮಾರುಕಟ್ಟೆಯಲ್ಲಿ ಅಮೆರಿಕ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಅಮೆರಿಕದ ಕೃಷಿಕರಿಗೆ ಮಾರಾಟದಲ್ಲಿ ದೊಡ್ಡ ನಷ್ಟ ಉಂಟಾಗಿದೆ. ಈ ನಷ್ಟವನ್ನು ಭರಿಸುವ ಉದ್ದೇಶದಿಂದಲೇ ‘ನೇರ ರೈತ ಸಹಾಯ ಮೊತ್ತ’ ಬಿಡುಗಡೆ ಮಾಡುವ ನಿರ್ಧಾರಕ್ಕೆ ಟ್ರಂಪ್ ಬಂದಿದ್ದಾರೆ.

ಹಾಗಾದ್ರೆ ಯಾಕೆ ಈ ಸ್ಕೀಂ? ಅನ್ನೋದನ್ನ ನೋಡೋದಾದ್ರೆ ಅಮೆರಿಕದಲ್ಲಿ ಹೊಸ ತೆರಿಗೆ ನೀತಿಗೆ ಪ್ರತಿಯಾಗಿ ಚೀನಾ ಅಮೆರಿಕ ಉತ್ಪನ್ನಗಳ ಮೇಲೆ ದುಬಾರಿ ಸುಂಕ ವಿಧಿಸಿದ್ದರಿಂದ ಅಮೆರಿಕದ ಕೃಷಿ ಉತ್ಪನ್ನಗಳು ಚೀನಾದ ಮಾರುಕಟ್ಟೆಯಲ್ಲಿ ದುಬಾರಿ ಆಗಿದ್ದು, ರೈತರಿಗೆ ಹಾನಿ ಸಂಭವಿಸಿದೆ.

ಈ ಸಂಕಷ್ಟವನ್ನು ಕಡಿಮೆ ಮಾಡಲು, ಮೋದಿ ಸರ್ಕಾರದ ‘ಕಿಸಾನ್ ಸಮ್ಮಾನ್ ನಿಧಿ’ ಮಾದರಿಯನ್ನು ಅನುಸರಿಸುತ್ತಾ, ಟ್ರಂಪ್ ಸರ್ಕಾರ ನೇರ ರೈತ ನೆರವು ಯೋಜನೆಯನ್ನು ಘೋಷಿಸಿದೆ. ಹೊಸ ಸುಂಕದಿಂದ ಸಂಗ್ರಹಿಸಿದ ಹಣದ ಪೈಕಿ 1 ಲಕ್ಷ ಕೋಟಿ ರೂ. ರೈತರಿಗೆ ನೇರವಾಗಿ ನೀಡಲಾಗತ್ತೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿ ಈ ಮೊತ್ತ ರೈತರ ಖಾತೆಗೆ ಜಮಾ ಮಾಡಲಾಗಲಿದೆ.

ವರದಿ : ಲಾವಣ್ಯ ಅನಿಗೋಳ

 

About The Author