Saturday, April 19, 2025

Latest Posts

ಉಕ್ರೇನ್​​ಗೆ ಮೋದಿ, ಪುಟಿನ್ ಜೊತೆ ಕುಸ್ತಿ ಫಿಕ್ಸ್!

- Advertisement -

ಭಾರತದ ಮಿತ್ರ ರಾಷ್ಟ್ರ ರಷ್ಯಾ.. ಅದೇ ರಷ್ಯಾಕ್ಕೆ ಶತ್ರುರಾಷ್ಟ್ರ ಆಗಿರೋದು ಉಕ್ರೇನ್.. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್​​ಗೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. 2 ವರ್ಷದಿಂದ ರಷ್ಯಾ ಮತ್ತೆ ಉಕ್ರೇನ್ ನಡುವೆ ಭಾರೀ ಯುದ್ಧ ನಡೀತಿದೆ. ಅದು ಇನ್ನೂ ಕೂಡ ನಿಂತಿಲ್ಲ ಹೀಗಿರುವಾಗ್ಲೇ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಉಕ್ರೇನ್​​ಗೆ ಭೇಟಿ ನೀಡಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹುಬ್ಬೇರಿಸಿದ್ದಾರೆ.

33 ವರ್ಷದ ಬಳಿಕ ಉಕ್ರೇನ್ ದೇಶಕ್ಕೆ ಭಾರತದ ಪ್ರಧಾನಿ ಭೇಟಿ ನೀಡ್ತಿರೋದು ಇದೇ ಮೊದಲು.. 1991ರ ನಂತರ ಉಕ್ರೇನ್‌ಗೆ ಭಾರತದ ಯಾವುದೆ ಪ್ರಧಾನಿ ಭೇಟಿ ನೀಡಿಲ್ಲ. ಯಾಕಂದ್ರೆ 1991ಕ್ಕೂ ಮೊದಲು ಉಕ್ರೇನ್ ದೇಶ ‘ಸೋವಿಯತ್ ರಷ್ಯಾ’ ಭಾಗವಾಗಿತ್ತು, ಆದರೆ 1991 ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದಿತ್ತು… ‘ಸೋವಿಯತ್ ರಷ್ಯಾ’ ವಿಭಜನೆ ಬಳಿಕ ಉಕ್ರೇನ್ ದೇಶಕ್ಕೆ ಭಾರತದ ಯಾವುದೇ ಪ್ರಧಾನಿಗಳು ಭೇಟಿ ನೀಡಿರಲಿಲ್ಲ. ಈಗ ಯುದ್ಧ ಕಾಲದಲ್ಲೇ ಮೋದಿ ಉಕ್ರೇನ್ ನೆಲಕ್ಕೆ ಕಾಲಿಟ್ಟಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕೀ ಜೊತೆ ಮಾತಾಡಿದ್ದಾರೆ.

ಉಕ್ರೇನ್​​ ಗೆ ಪ್ರಧಾನಿ ಮೋದಿ ಪೋಲೆಂಡ್ ದೇಶದ ಮುಖಾಂತರ ವಿಶೇಷ ರೈಲಿನಲ್ಲಿ ತೆರಳಿದ್ದಾರೆ. ವೈಮಾನಿಕ ದಾಳಿ ನಡೆಯೋ ಸಾಧ್ಯತೆ ಇದ್ದ ಕಾರಣ ಟ್ರೇನ್​ ಫೋರ್ಸ್ ಒನ್ ಹೆಸರಿನ ವಿಶೇಷ ರೈಲಿನಲ್ಲಿ ಪ್ರಧಾನಿ ಮೋದಿ ಉಕ್ರೇನ್​​ನ ರಾಜಧಾನಿ ಕೀವ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಯುದ್ಧ ಆರಂಭವಾದಾಗಿನಿಂದಲೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್​​ಕಿ ಮೋದಿ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸಿ ಅಂತ ಮನವಿ ಮಾಡಿದ್ರು… ಉಕ್ರೇನ್ ಹಾಗೇ ರಷ್ಯಾ ದೇಶಗಳು ಶಾಂತಿಯುತ ಮಾತುಕತೆ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಬೇಕು ಅಂತ ಹೇಳಿದ್ರು.. ಶಾಂತಿ ಸ್ಥಾಪಿಸಲು ನಾವು ನಿಮ್ ಜೊತೆ ಯಾವಾಗ್ಲೂ ಇರ್ತೀನಿ ಅಂತ ಮೋದಿ ಹೇಳಿದ್ರು.. ಈಗ ಖುದ್ದು ಝೆಲೆನ್ಸ್​​ಕಿ ಜೊತೆಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ..

ಉಕ್ರೇನ್ ಹಾಗೇ ರಷ್ಯಾಗಳು ಪರಸ್ಪರ ಹೊಡೆದಾಡಿಕೊಳ್ತಿವೆ.. ರಷ್ಯಾ ಈ ಮೊದಲಿನಿಂದಲೂ ಭಾರತದ ನಂಬರ್ 1 ಮಿತ್ರದೇಶ. ಸ್ವಾತಂತ್ರ್ಯಾನಂತರ ಭಾರತ ಹಾಗೂ ರಷ್ಯಾದ ಫ್ರೆಂಡ್​ಶಿಪ್ ಇನ್ನೂ ಗಟ್ಟಿಯಾಗಿದೆ. 1971ರಲ್ಲಿ ಭಾರತ ಹಾಗೇ ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಭಾರತದ ಪರ ಗಟ್ಟಿ ಧ್ವನಿಯಲ್ಲಿ ಮಾತಾಡಿದ್ದು ಇದೇ ರಷ್ಯ. ಭಾರತ ಪೆಟ್ರೋಲಿಯಂ ಉತ್ಪನ್ನಗಳಿಗೂ ರಷ್ಯಾವನ್ನೇ ಹೆಚ್ಚು ಅವಲಂಭಿಸಿದೆ. ವ್ಯಾಪಾರ, ರಕ್ಷಣಾ ವಿಚಾರದಲ್ಲೂ ಭಾರತ ಹಾಗೂ ರಷ್ಯ ನಡುವೆ ಒಳ್ಳೇ ಸಂಬಂಧ ಇತ್ತು.. ಆದ್ರೆ ಇನ್ಮುಂದೆ ಹೀಗೇ ಅದು ಮುಂದುವರಿಯುತ್ತಾ ಅನ್ನೋದು ಪ್ರಶ್ನೆ. ಯಾಕಂದ್ರೆ 2022ರಲ್ಲಿ ರಷ್ಯಾ ಉಕ್ರೇನ್ ನಡುವೆ ಯುದ್ಧ ಶುರುವಾದ್ಮೇಲೆ ಭಾರತ ಯಾರಿಗೂ ಸಪೋರ್ಟ್ ಮಾಡಿರಲಿಲ್ಲ. ಆದ್ರೆ ಈಗ ಯುದ್ಧದ ಟೈಂನಲ್ಲಿ ಪ್ರಧಾನಿ ಮೋದಿ ರಷ್ಯಾ ಬಿಟ್ಟು ಉಕ್ರೇನ್​​ಗೆ ಹೋಗಿದ್ದಾರೆ.. ಸಹಜವಾಗಿಯೇ ಇದು ರಷ್ಯಾಕ್ಕೆ ಸಿಟ್ಟು ಬರಿಸುತ್ತೆ.. ಹಲವು ದಶಕಗಳಿಂದ ಫ್ರೆಂಡ್ ಆಗಿದ್ದ ಭಾರತ ಈಗ ಅವರ ಶತ್ರು ರಾಷ್ಟ್ರಕ್ಕೆ ಹೋಗಿದ್ದಾರೆ ಅಂದ್ರೆ ಅದು ಪುಟಿನ್ ಕಣ್ಣು ಕೆಂಪಾಗಿಸುತ್ತೆ.. ಕಳೆದ ಜುಲೈ ತಿಂಗಳಲ್ಲಿ ಪ್ರಧಾನಿ ಮೋದಿ ರಷ್ಯಾಕ್ಕೆ ಹೋಗಿ ಬಂದಿದ್ರು.. ಅಲ್ಲೂ ಪುಟಿನ್ ಜೊತೆ ಶಾಂತಿ ಸಂಧಾನ ನಡೆಸೋ ಪ್ರಯತ್ನ ಮಾಡಿದ್ರು.. ಈಗ ಮತ್ತೆ ಉಕ್ರೇನ್​​ಗೆ ಹೋಗಿರೋದು ನಿಜಕ್ಕೂ ರಷ್ಯಾ ಅಧ್ಯಕ್ಷ ಪುಟಿನ್​​ಗೆ ಸಿಟ್ಟು ತರಿಸಿರುತ್ತೆ. ಮೋದಿ ಉಕ್ರೇನ್ ಭೇಟಿ ಈಗ ಭಾರತ-ರಷ್ಯಾ ನಡುವಿನ ಸಂಬಂಧಕ್ಕೂ ಅಡ್ಡಿ ಆಗಬಹುದು..

– ಜಯಕೀರ್ತಿ.ಎಂ.ಎಸ್

- Advertisement -

Latest Posts

Don't Miss