ಸಾಮಾಜಿಕ ಜಾಲತಾಣದ ಶಕ್ತಿ ಎಷ್ಟು ದೊಡ್ಡದು ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಕುಂಭಮೇಳ ಮೊನಲಿಸಾ. ಒಮ್ಮೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಈ ಯುವತಿ, ಈಗ ತೆಲುಗು ಚಿತ್ರರಂಗದ ಹೊಸ ನಾಯಕಿ.
ಹೌದು, ಮಧ್ಯಪ್ರದೇಶದ ಇಂಧೋರಿನ ಮೋನಲಿಸಾ ಭೋಸ್ಲೆ, ಕುಂಭಮೇಳದಲ್ಲಿ ಜಪಮಾಲೆ ಮತ್ತು ಹೂವುಗಳನ್ನು ಮಾರುತ್ತಿದ್ದ ವೇಳೆ, ಒಬ್ಬ ಫೋಟೋಗ್ರಾಫರ್ ತೆಗೆದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಕ್ಷಣಾರ್ಧದಲ್ಲಿ ಅವರ ಅಂದ, ಸರಳತೆ, ನಗು ಎಲ್ಲವೂ ನೆಟ್ಟಿಗರ ಮನ ಗೆದ್ದವು. ಹೀಗೆ ‘ಕುಂಭಮೇಳ ಮೊನಲಿಸಾ ಎಂದು ಕರೆಸಿಕೊಳ್ಳುತ್ತಿದ್ದ ಮೋನಲಿಸಾ, ಈಗ ಸೆಲೆಬ್ರಿಟಿ.
ಇದೀಗ ಅವರು ತೆಲುಗು ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. ಲೈಫ್ ಎನ್ನುವ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಯಿ ಚರಣ್ ನಾಯಕನಾಗಿದ್ದು, ಚಿತ್ರವನ್ನು ಶ್ರೀನು ಕೋಟಪೇಟಿ ನಿರ್ದೇಶಿಸುತ್ತಿದ್ದಾರೆ. ವಂಗಮಾಂಬ ಕ್ರಿಯೇಶನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಹೈದರಾಬಾದ್‌ನ ಪ್ರಸಾದ್ ಲ್ಯಾಬ್ಸ್‌ನಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಮೊನಲಿಸಾ, ಈ ಸಿನಿಮಾ ಎಲ್ಲರಿಗೂ ನಿಜವಾದ ಲೈಫ್ ಕೊಡಲಿದೆ ಎಂಬ ವಿಶ್ವಾಸವಿದೆ. ನನಗೆ ಈಗ ತೆಲುಗು ಬರುವುದಿಲ್ಲ, ಆದರೆ ಸಿನಿಮಾ ಮುಗಿಯುವ ವೇಳೆಗೆ ಕಲಿಯುತ್ತೇನೆ ಎಂದಿದ್ದಾರೆ.
ವೈರಲ್ ಚಿತ್ರದಿಂದ ಆರಂಭವಾದ ಈ ಪಯಣ, ಈಗ ಸಿನಿಮಾ ಲೋಕದವರೆಗೂ ತಲುಪಿದೆ. ಇಂದಿಗೆ ಮೊನಲಿಸಾ ದೇಶದಾದ್ಯಂತ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ತೆಲುಗು ಚಿತ್ರರಂಗದ ಜೊತೆಗೆ, ಒಂದು ಹಿಂದಿ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮಾಯೆಯಿಂದ ಕುಂಭಮೇಳದ ರುದ್ರಾಕ್ಷಿ ಮಾರಾಟಗಾರ್ತಿ, ಇದೀಗ ಸಿನಿತಾರೆ. ಇದೇ ಕುಂಭಮೇಳ ಮೊನಲಿಸಾದ ನಿಜವಾದ ಲೈಫ್ ಸ್ಟೋರಿ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




