ಟಿ20ಯಲ್ಲಿ ಶ್ರೀಲಂಕಾಗೆ ಹಣದ ಹೊಳೆ

www.karnatakatv.net ಇಂಡಿಯಾ ಟೀಂ ಜೊತೆ ಸರಣಿಯನ್ನು ಆಯೋಜಿಸಲು ಜಗತ್ತಿನ ಯಾವುದೇ ಕ್ರಿಕೆಟ್ ಮಂಡಳಿಗಳಾದರು ತುಂಬಾ ಆಸಕ್ತಿಯನ್ನು ತೋರಿಸುತ್ತಾರೆ.  ಏಕೆಂದರೆ, ಭಾರತ ತಂಡದ ಜೊತೆ ಆಟವಾಡಿದರೆ ಎದುರಾಳಿ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಹಣದ ಹೊಳೆ ಹರಿದುಬರುತ್ತದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ.. ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡು ಸ್ವದೇಶದಲ್ಲಿ ದ್ವೈವಾರ್ಷಿಕ ಸರಣಿ ಆಯೋಜಿಸಿತ್ತು. ಈ ಸರಣಿಯಿಂದ ನಷ್ಟದಿಂದ ಪಾತಾಳಕ್ಕೆ ತಲುಪಿದ್ದ ಶ್ರೀ ಲಂಕಾ ಕ್ರಿಕೆಟ್ ಮಂಡಳಿಗೆ ಹಣದ ಹೊಳೆಯೇ ಹರಿದಿದೆ. ಆಟಗಾರರಿಗೆ ವೇತನ ಪಾವತಿಸಲು ಸಾಧ್ಯವಿಲ್ಲದಂತಹ ದುಸ್ಥಿತಿಯಲ್ಲಿದ್ದ ಮಂಡಳಿಗೆ ನೂರು ಕೋಟಿಗೂ ಹೆಚ್ಚು ಆದಾಯ ತಂದುಕೊಟ್ಟದೆ.

ಶ್ರೀ ಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರ ಪ್ರಕಾರ, ಈ ಸರಣಿಯ ಮೂಲಕ ಲಂಕಾ ಮಂಡಳಿಗೆ 107.7 ಕೋಟಿ ರೂ. ಆದಾಯ ಬಂದಿದೆಯಂತೆ.

About The Author