ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ರಾಜ್ಯದ ಹಲವೆಡೆ ಮುಂಬರುವ ದಿನಗಳಲ್ಲಿ ತೀವ್ರ ಮಳೆ ನಿರೀಕ್ಷಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದೇ ವೇಳೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದೇ ರೀತಿ, ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಯಚೂರು, ಕೊಪ್ಪಳ, ಗದಗ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಹ ಮಳೆ ನಿರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಮಳೆ ದಾಖಲಾಗಿದೆ. ಆಳಂದ, ಹೊನ್ನಾವರ, ಉಡುಪಿ, ಕದ್ರಾ, ಕೋಟಾ, ಮಂಕಿ, ಚಿತ್ತಾಪುರ, ಕ್ಯಾಸಲ್‌ರಾಕ್, ಬೆಳ್ತಂಗಡಿ, ಗೋಕರ್ಣ, ಸಿದ್ದಾಪುರ, ಕಲಬುರಗಿ, ಕಮಲಾಪುರ, ಸೇಡಂ, ಭಾಗಮಂಡಲ, ಕಾರವಾರ, ಯಲ್ಲಾಪುರ, ಕುಂದಾಪುರ, ಶಕ್ತಿನಗರ, ಚಿಂಚೋಳಿ, ಶೃಂಗೇರಿ, ಕಮ್ಮರಡಿ, ಗೇರುಸೊಪ್ಪ, ಸವಣೂರು, ಗೋಕಾಕ್, ಸೇಡಬಾಳ, ಜಯಪುರ ಸೇರಿ ಅನೇಕ ಪ್ರದೇಶಗಳಲ್ಲಿ ಮಳೆಯಾಗಿದೆ.
ಇದೆಲ್ಲದರ ಜೊತೆಗೆ ಕೊಪ್ಪ, ನಾಪೊಕ್ಲು, ಬೆಂಗಳೂರು ಕೆಐಎಎಲ್, ಬರಗೂರು, ಕಳಸ, ಜೋಯ್ಡಾ, ಮಾಣಿ, ಗುತ್ತಲ್, ನರಗುಂದ, ಕುರ್ಡಿ, ಜೇವರ್ಗಿ, ಮಂಠಾಳ, ಶೋರಾಪುರ, ನಾರಾಯಣಪುರ, ಆಲಮಟ್ಟಿ, ಗಬ್ಬೂರು, ಮಾನ್ವಿ, ನಲ್ವತವಾಡ, ಯಡ್ರಾಮಿ, ಬೆಳ್ಳಟ್ಟಿ, ಸೋಮವಾರಪೇಟೆ, ಕೊಟ್ಟಿಗೆಹಾರ, ಲೋಕಾಪುರ, ಜಗಳೂರು, ಕಡೂರು, ಚಿತ್ರದುರ್ಗ ಭಾಗಗಳಲ್ಲಿಯೂ ಮಳೆಯಾಗಿದೆ.
ಹವಾಮಾನ ಇಲಾಖೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವ ಕಾರಣ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.