ಕರ್ನೂಲ್ ಬಸ್ ದುರಂತದಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಈ ಭೀಕರ ದುರಂತದಲ್ಲಿ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಪಾರಾಗಿದ್ದಾರೆ. ಈ ಘಟನೆ ನಡೆದಿದ್ದು ಹೇಗೆ ಎಂಬುದನ್ನು, ಪ್ರತ್ಯಕ್ಷವಾಗಿ ಕಂಡ ಹಾರಿಕಾ ವಿವರಿಸಿದ್ದಾರೆ.
ಈ ಘಟನೆ ಸುಮಾರು ಬೆಳಗಿನ ಜಾವ 3ರಿಂದ 3,30ರ ಸುಮಾರಿಗೆ ಸಂಭವಿಸಿದೆ. ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಘಟನೆ ಸಂಭವಿಸಿದಾಗ ಬಹುತೇಕ ಮಂದಿ ಗಾಢ ನಿದ್ರೆಯಲ್ಲಿದ್ರು. ಬೆಂಕಿಯ ಜ್ವಾಲೆ ವೇಗವಾಗಿ ಆವರಿಸಿದ ಕಾರಣ, ಹಲವರಿಗೆ ಹೊರಬರಲು ಸಾಧ್ಯವಾಗಲಿಲ್ಲ. ನೋಡ ನೋಡುತ್ತಿದ್ದಂತೆ ಬೆಂಕಿ ಇಡೀ ಬಸ್ಸನ್ನೇ ಆವರಿಸಿತ್ತು. ಬಸ್ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದ್ದಾರೆ.
ನಾನು ನಿದ್ರೆಯಲ್ಲಿದ್ದೆ. ಗದ್ದಲ ಕೇಳಿ ಎಚ್ಚರಗೊಂಡಾಗ, ಬಸ್ ಸಂಪೂರ್ಣವಾಗಿ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು. ಅದೃಷ್ಟಕ್ಕೆ ಬಸ್‌ನ ಹಿಂಭಾಗದ ತುರ್ತು ನಿರ್ಗಮನದ ಬಾಗಿಲು ಮುರಿದಿತ್ತು. ನಾನು ಅದರ ಮೂಲಕ ಹೊರಕ್ಕೆ ಜಿಗಿದೆ. ಜಿಗಿಯುವಾಗ ನನಗೆ ಗಾಯಗಳಾಗಿವೆ.
ಈ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಕರ ಗೌಪ್ಯತೆಗಾಗಿ ಸೀಟ್‌ಗಳಿಗೆ ಪರದೆಗಳಿದ್ದವು. ಹಲವು ಪ್ರಯಾಣಿಕರಿಗೆ ಮತ್ತಷ್ಟು ತೊಂದರೆ ಉಂಟು ಮಾಡಿತು. ಇದು ಸ್ಲೀಪರ್ ಆಗಿದ್ದರಿಂದ, ನಾವು ನಮ್ಮ ಆಸನದಲ್ಲಿ ಹೋಗಿ ಮಲಗುತ್ತೇವೆ. ಪರದೆಗಳ ಕಾರಣದಿಂದಾಗಿ ಯಾರು ಎಲ್ಲಿದ್ದಾರೆ ಅಥವಾ ಎಷ್ಟು ಜನರಿದ್ದಾರೆ ಎಂದು ತಿಳಿಯಲು ಸಾಧ್ಯವಾಗಲಿಲ್ಲ ಅಂತಾ, ಭಯಾನಕ ದೃಶ್ಯದ ಬಗ್ಗೆ ಹಾರಿಕಾ ವಿವರಿಸಿದ್ದಾರೆ.
ಬದುಕುಳಿದ ಇನ್ನೊಬ್ಬ ಪ್ರಯಾಣಿಕರಾದ ಸೂರ್ಯ ಹೇಳಿದಂತೆ, ಒಂದು ಬೈಕ್ ಬಂದು ಏನೋ ಸಂಭವಿಸಿತು. ನಮಗೆ ಸ್ಪಷ್ಟತೆ ಇಲ್ಲ. ಬಸ್‌ನ ಕೆಳಗೆ ಬೈಕ್ ಸಿಲುಕಿ ಕಿಡಿಗಳು ಬರಲು ಶುರುವಾಗಿ ನಂತರ ಬೆಂಕಿ ಹೊತ್ತಿಕೊಂಡಿತು. ಅದನ್ನು ನೋಡಿದವರು ತಕ್ಷಣ ಕೆಳಗಿಳಿದಿದ್ರು ಅಂತಾ ಹೇಳಿದ್ರು.

