Sunday, April 13, 2025

Latest Posts

ಚೆನ್ನಮ್ಮ ವೃತ್ತದ ಬಳಿಯಲ್ಲಿ 200ಕ್ಕೂ ಅಧಿಕ ಸೈಲೆನ್ಸರ್ ನಾಶ: ಕರ್ಕಶ ಶಬ್ದ ಮಾಡಿದರೇ ಹುಷಾರ್..!

- Advertisement -

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಶಾಂತಿಗೆ ಭಂಗವನ್ನುಂಟು ಮಾಡುವ ಕರ್ಕಶ ಬದ್ಧದ ಬೈಕ್ ಸೈಲೆನ್ಸರ್ ಗಳನ್ನು ನಾಶ ಮಾಡುವ ಮೂಲಕ ಪೊಲೀಸ್ ಕಮೀಷನರೇಟ್ ಮಹತ್ವದ ಕಾರ್ಯವನ್ನು ಮಾಡಿದೆ. ಬೇಕಾಬಿಟ್ಟಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕರ್ಕಶ ಶಬ್ದ ಮಾಡಿ ಜನರಿಗೆ ಕಿರಿಕಿರಿ ಮಾಡುತ್ತಿದ್ದ ಸುಮಾರು ಎರಡು ನೂರಕ್ಕೂ ಅಧಿಕ ಬೈಕ್ ಸೈಲೆನ್ಸರ್ ವಶಕ್ಕೆ ಪಡೆದ ಸಂಚಾರಿ ಪೊಲೀಸರು, ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ರೋಡ್ ರೂಲರ್ ಮೂಲಕ ನಾಶ ಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುವುದನ್ನೇ ಟ್ರೆಂಡ್ ಮಾಡಿಕೊಂಡ ಪುಡಾರಿಗಳಿಗೆ ಹಾಗೂ ಬೈಕ್ ಸವಾರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಟ್ರಾಫಿಕ್ ಐರ್ಲೆಂಡ್ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ನೇತೃತ್ವದಲ್ಲಿ ರೋಡ್ ರೂಲರ್ ಹಾಯಿಸುವ ಮೂಲಕ ನಾಶ ಪಡಿಸಲಾಯಿತು. ಈಗಾಗಲೇ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಿಂದ ಸುಮಾರು 200ಕ್ಕೂ ಅಧಿಕ ಸ್ಯಾಲನ್ಸರ್ ವಶಕ್ಕೆ ಪಡೆದು ನಾಶ ಪಡಿಸಲಾಗಿದೆ. ಅವಳಿನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟುಮಾಡಬಹುದಾದ ವಾಹನಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ನೀಡುವ ಸದುದ್ದೇಶದಿಂದ ಇಂತಹದೊಂದು ಕಾರ್ಯಕ್ರಮ ನಡೆಸಲಾಯಿತು.

ಇನ್ನೂ ಸತತ ಎರಡು ತಿಂಗಳಿಂದ ಕಾರ್ಯಾಚರಣೆ ನಡೆಸಿ ಸೈಲೆನ್ಸರ್ ವಶಕ್ಕೆ ಪಡೆದು ಹುಬ್ಬಳ್ಳಿಯ ಆಯಕಟ್ಟಿನ ಸ್ಥಳಗಳಲ್ಲಿ ಒಂದಾಗಿರುವ ಚೆನ್ನಮ್ಮ ವೃತ್ತದ ಬಳಿಯಲ್ಲಿ ವಿವಿಧ ಮಾಡೆಲ್ ಬೈಕ್ ಗಳ 200ಕ್ಕೂ ಅಧಿಕ ಸೈಲೆನ್ಸರ್ ನಾಶ ಪಡಿಸಲಾಯಿತು.

- Advertisement -

Latest Posts

Don't Miss