Sunday, December 1, 2024

Latest Posts

ಇನ್​​ಸ್ಟಾಗ್ರಾಂನಲ್ಲಿ ದೇಶದ ಟಾಪ್ 5 ಸೆಲೆಬ್ರಿಟೀಸ್- ಮೋದಿಯನ್ನೂ ಮೀರಿಸಿದ ಕ್ರಿಕೆಟರ್!

- Advertisement -

5ಜಿ ಯುಗ ಆರಂಭ ಆದ್ಮೇಲೆ ಫೇಸ್​ಬುಕ್, ಇನ್​​ಸ್ಟಾ ಗ್ರಾಂ, ಯೂಟ್ಯೂಬ್​​ನದ್ದೇ ಹವಾ. ಅದರಲ್ಲೂ ಇನ್ಸ್​​ಟಾಗ್ರಾಂ ನೋಡುವವರ ಸಂಖ್ಯೆ ಮಾತ್ರ ಕೋಟಿಗಟ್ಟಲೆ ಇದೆ. ಇಡೀ ಭಾರತವೇ ಇನ್​​ಸ್ಟಾಗ್ರಾಂಗೆ ಅಡಿಕ್ಟ್ ಆಗಿದೆ. ವೀವ್ಸ್ ಹಾಗೇ ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಹಲವರು ಮಾಡೋ ಸರ್ಕಸ್ ಒಂದೆರಡಲ್ಲ.. ಇಂಥಾ ಇನ್​​ಸ್ಟಾಗ್ರಾಂನಲ್ಲಿ ಲಕ್ಷಗಟ್ಟಲೆ ವೀವ್ಸ್, ಫಾಲೋವರ್ಸ್ ಹೆಚ್ಚಿಸಿಕೊಂಡು ಸ್ಟಾರ್​​​ ಅನ್ನಿಸಿಕೊಳ್ಳೋಕೆ ಎಷ್ಟೋ ಜನ ದಿನವೂ ಟ್ರೈ ಮಾಡ್ತಾನೆ ಇರ್ತಾರೆ. ಸದ್ಯ ಈಗ ಇನ್​ಸಟಾ ಗ್ರಾಂನಲ್ಲಿ ದೇಶದ ಟಾಪ್ 5 ಸೆಲೆಬ್ರಿಟಿ ಯಾರು ಅಂತ ತೋರಿಸ್ತೀವಿ ನೋಡಿ..

ಈ ಟಾಪ್​ 5 ಲಿಸ್ಟ್​​ನಲ್ಲಿ 3 ಜನ ಸಿನಿ ತಾರೆಯರಿದ್ರೆ, ಒಬ್ಬರು ಟಾಪ್ ರಾಜಕಾರಣಿ, ಇನ್ನೊಬ್ರು ಕ್ರಿಕೆಟ್ ಇದ್ದಾರೆ..

ಇನ್​​ಟಾಗ್ರಾಂನಲ್ಲಿ ಟಾಪ್ 1 ಪ್ಲೇಸ್​​ ಈವರೆಗೂ ಯಾರೂ ರೀಚ್ ಮಾಡೋಕೂ ಆಗದಷ್ಟು ಎತ್ತರದಲ್ಲಿದೆ. ಅಷ್ಟು ಫಾಲೋವರ್ಸ್ ಹೊಂದಿರೋದು ಟೀಂ ಇಂಡಿಯಾ ಆಟಗಾರ, ಆರ್​ ಸಿ ಬಿ ಕಿಂಗ್ ವಿರಾಟ್ ಕೊಹ್ಲಿ.. ಯೆಸ್ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಇರೋ ಫಾಲೋವರ್ಸ್ ನೋಡಿದ್ರೆನೇ ಶಾಕ್ ಆಗ್ತೀರ… ಬರೋಬ್ಬರಿ 271 ಮಿಲಿಯನ್ ಜನ ವಿರಾಟ್ ಕೊಹ್ಲಿ ಅವ್ರನ್ನ ಫಾಲೋ ಮಾಡ್ತಿದ್ದಾರೆ.. ಅಂದ್ರೆ ದೇಶದ ಬರೋಬ್ಬರಿ 27 ಕೋಟಿಗೂ ಹೆಚ್ಚು ಜನ ಕೊಹ್ಲಿಯನ್ನ ಫಾಲೋ ಮಾಡ್ತಿದ್ದಾರೆ. ದೇಶದ ಇನ್ಯಾವುದೇ ಸೆಲೆಬ್ರಿಟಿ ಕೂಡ ಇಷ್ಟು ಫಾಲೋವರ್ಸ್ ಅನ್ನು ಹೊಂದಿಲ್ಲ.. ಉಳಿದವರು 100 ಮಿಲಿಯನ್ ಕೂಡ ದಾಟಿಲ್ಲ ಆದ್ರೆ ವಿರಾಟ್ ಕೊಹ್ಲಿ ಮಾತ್ರ 271 ಮಿಲಿಯನ್ ಫಾಲೋವರ್ಸ್​ ಅನ್ನು ಇನ್​​ಸಟಾಗ್ರಾಂನಲ್ಲಿ ಹೊಂದಿದ್ದಾರೆ. ಟಾಪ್ 1ಪ್ಲೇಸ್​​​ ರೆಕಾರ್ಡ್​ ಮುರಿಯೋಕೆ ಸ್ವತಃ ಪ್ರಧಾನಿ ಮೋದಿಗೂ ಸಾಧ್ಯವಾಗಿಲ್ಲ…

- Advertisement -

Latest Posts

Don't Miss