Sunday, September 8, 2024

Latest Posts

1 ಓವರ್​ನಲ್ಲಿ 43 ರನ್- ಇಂಗ್ಲೆಂಡ್ ವೇಗಿಯ ಕೆಟ್ಟ ಬೌಲಿಂಗ್!

- Advertisement -

ಒಂದೇ ಓವರ್​ನಲ್ಲಿ ಆರು ಸಿಕ್ಸ್.. ಅಂದ್ರೆ, ಆರು ಬಾಲ್​ಗಳಿಗೆ ಆರು ಸಿಕ್ಸರ್​ಗಳನ್ನು ಬಾರಿಸೋದು ದೊಡ್ಡ ಸಾಧನೆಯೇ ಸರಿ.. ಎಂತಹದ್ದೇ ಕೆಟ್ಟ ಬೌಲರ್‌ ಆದರೂ, ಎಂತಹ ಕೆಟ್ಟ ಎಸೆತಗಳನ್ನೇ ಎಸೆದರೂ, ಒಬ್ಬ ಬೌಲರ್‌ ಒಂದು ಓವರ್‌ನಲ್ಲಿ ಆರಕ್ಕೆ ಆರು ಎಸೆತಗಳಿಗೆ ಸಿಕ್ಸರ್‌ ಬಾರಿಸಿದರೂ ಗರಿಷ್ಠ 36 ರನ್‌ ಬಿಟ್ಟುಕೊಡಬಹುದು. ಅಷ್ಟಕ್ಕೂ ಈ ನಾವು ವಿಷಯವನ್ನು ಯಾಕೆ ಹೇಳ್ತಿದ್ದೀವಿ ಅಂದ್ರೆ, ಇಂಗ್ಲೆಂಡ್​ನ ಬೌಲರ್​ವೊಬ್ಬ ಒಂದೇ ಓವರ್​​ನಲ್ಲಿ ಬರೋಬ್ಬರಿ 43 ರನ್​ ಬಿಟ್ಟುಕೊಟ್ಟು ರಾತ್ರೋರಾತ್ರಿ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ಯಸ್.. ನಾವು ಹೇಳ್ತಿರೋ ಬೌಲರ್ ಬೇರ್ಯಾರು ಅಲ್ಲ.. ಒಲ್ಲಿ ರಾಬಿನ್ಸನ್.. ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಒಲ್ಲಿ ರಾಬಿನ್‌ಸನ್‌ ಒಂದೇ ಓವರ್‌ಗೆ 43 ರನ್‌ ಕೊಟ್ಟಿದ್ದಾರೆ. ಸಸೆಕ್ಸ್‌ ಪರವಾಗಿ ಬೌಲಿಂಗ್‌ ಮಾಡುತ್ತಿರುವಾಗ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ಗಳು, ಮೂರು ಬೌಂಡರಿ ಹಾಗೂ ಒಂದು ಸಿಂಗಲ್‌ ರನ್‌ ಬಿಟ್ಟುಕೊಂಡಿದ್ದಾರೆ. ಅಲ್ಲದೇ, ಓವರ್​ನಲ್ಲಿ 3 ನೋಬಾಲ್‌ಗಳನ್ನು ಎಸೆದಿದ್ದಾರೆ. ಲೀಸೆಸ್ಟರ್‌ಶೈರ್‌ ತಂಡದ ಲೂಯಿಸ್‌ ಕಿಂಬರ್‌ ಅವರು ಐದು ಸಿಕ್ಸರ್‌ ಹಾಗೂ ಮೂರು ಬೌಂಡರಿ ಬಾರಿಸುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ. ಹಾಗಾದ್ರೆ, 59ನೇ ಓವರ್ ಮಾಡಿದ ಒಲ್ಲಿ ರಾಬಿನ್ಸನ್ ಯಾವ ರೀತಿಯಲ್ಲಿ ರನ್ ಬಿಟ್ಟುಕೊಟ್ರು ಎಂಬುದನ್ನು ನೋಡೋದಾದ್ರೆ..
1ನೇ ಎಸೆತ- ಸಿಕ್ಸ್
2ನೇ ಎಸೆತ- 6 + ನೋ ಬಾಲ್
3ನೇ ಎಸೆತ- ಬೌಂಡರಿ
4ನೇ ಎಸೆತ- ಸಿಕ್ಸ್
5ನೇ ಎಸೆತ- ಬೌಂಡರಿ
6ನೇ ಎಸೆತ- 6 + ನೋ ಬಾಲ್
7ನೇ ಎಸೆತ- ಬೌಂಡರಿ
8ನೇ ಎಸೆತ- 6 + ನೋ ಬಾಲ್
9ನೇ ಎಸೆತ- 1 ರನ್
ಹೀಗೆ ಒಂದು ಓವರ್​ನಲ್ಲಿ 9 ಎಸೆತಗಳನ್ನು ಮಾಡಿದ ಅನುಭವಿ ರಾಬಿನ್ಸನ್, ಬರೋಬ್ಬರಿ 43 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಆಗಿದ್ದಾರೆ. 30 ವರ್ಷದ ರಾಬಿನ್ಸನ್‌ ಅವರು ಇಂಗ್ಲೆಂಡ್‌ ಪರವಾಗಿ 20 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಸಾಕಷ್ಟು ಅನುಭವ ಇದ್ದರೂ ಒಂದೇ ಒಂದು ಡಾಟ್‌ ಬಾಲ್‌ ಎಸೆಯಲು ಆಗಲಿಲ್ಲ.
ರಾಬಿನ್ಸನ್‌ ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಪ್ರಥಮ ದರ್ಜೆ ಇತಿಹಾಸದಲ್ಲಿಯೇ ಎರಡನೇ ಅತಿ ದುಬಾರಿ ಓವರ್‌ ಎಸೆದ ಬೌಲರ್‌ ಎನಿಸಿದರು.
ಒಂದೇ ಓವರ್​​ನಲ್ಲಿ 77ರನ್.. ಇತಿಹಾಸ ಸೃಷ್ಟಿ!
ನೀವು ಇದುವರೆಗೆ ಕೇಳಿದ್ದು ಒಲ್ಲಿ ರಾಬಿನ್ಸನ್ ಅವರು ಒಂದು ಓವರ್​ನಲ್ಲಿ 43 ರನ್ ಬಿಟ್ಟುಕೊಟ್ಟ ಸ್ಟೋರಿಯನ್ನು. ಕುತೂಹಲ ಸಂಗತಿಯಂದರೆ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರಾಬಿನ್ಸನ್ ಅವರಿಗಿಂತ ಕೆಟ್ಟದಾಗಿ ಬೌಲಿಂಗ್ ಮಾಡಿದ ಅಪಕೀರ್ತಿ ನ್ಯೂಜಿಲೆಂಡ್​ನ ಬರ್ಟ್ ವ್ಯಾನ್ಸ್​​ಗೆ ಸಲ್ಲುತ್ತದೆ.
1990ರಲ್ಲಿ ನ್ಯೂಜಿಲ್ಯಾಂಡ್‌ನ ಬರ್ಟ್‌ ವ್ಯಾನ್ಸ್‌ ಅವರು ಶೆಲ್‌ ಟ್ರೋಫಿ ಪಂದ್ಯದಲ್ಲಿ 77 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಇತಿಹಾಸವಾಗಿದೆ. 1998ರಲ್ಲಿ ಇಂಗ್ಲೆಂಡ್‌ನ ಅಲೆಕ್ಸ್‌ ಟುಡೋರ್‌ ಅವರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ‌38 ರನ್‌ ಬಿಟ್ಟುಕೊಟ್ಟಿದ್ದು ಇದುವರೆಗಿನ ಎರಡನೇ ದಾಖಲೆ ಆಗಿತ್ತು. ಈಗ ಆ ಅನಗತ್ಯ ದಾಖಲೆಯು ಒಲೀ ರಾಬಿನ್‌ಸನ್‌ ಅವರದ್ದಾಗಿದೆ.
ಕೌಂಟಿ ಚಾಂಪಿಯನ್​ಶಿಪ್​ ಡಿವಿಷನ್ 2ರಲ್ಲಿ ಲೂಯಿಸ್​ ಕಿಂಬರ್ ಬೃಹತ್​ ದಾಖಲೆಯೊಂದನ್ನು ಮಾಡಿದ್ದಾರೆ. ಲೀಸೆಸ್ಟರ್ಶೈರ್ ತಂಡದ ಆಟಗಾರನಾಗಿರುವ ಅವರು ಸಸೆಕ್ಸ್ ವಿರುದ್ದದ ಪಂದ್ಯದಲ್ಲಿ ಕಿಂಬರ್ ಐತಿಹಾಸಿಕ ದ್ವಿಶತಕ ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್​ಮನ್ ಕೇವಲ 127 ಎಸೆತಗಳಲ್ಲಿ 243 ರನ್ ಗಳಿಸಿದ್ದಾರೆ. ಈ ಇನ್ನಿಂಗ್ಸ್​ ದಾಖಲೆಯ 21 ಸಿಕ್ಸರ್​ಗಳಿಂದ ಕೂಡಿತ್ತು.

- Advertisement -

Latest Posts

Don't Miss