Wednesday, February 5, 2025

Latest Posts

ಜೀವನವನ್ನೇ ಕಿತ್ತುಕೊಂಡ ಕೊರೊನಾ…

- Advertisement -

www.karnatakatv.net: ರಾಜ್ಯ- ಕಲಬುರಗಿ: ತಂದೆ-ತಾಯಿ ಸಾವನ್ನ ಜೀರ್ಣಿಸಿಕೊಳ್ಳಲಾಗದ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಂದೆಡೆಯಾದ್ರೆ, ಮತ್ತೊಂದೆಡೆ ಮಹಾಮಾರಿ ಕೊರೊನಾಗೆ ಒಂದೇ ದಿನ ತಾಯಿ-ಮಗ ಇಬ್ಬರೂ ಬಲಿಯಾಗಿದ್ದಾರೆ. ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಚಾಂದಿಬಾಯಿ ನಾಯಕ್(74), ಭಜನ್ ನಾಯಕ್(32) ಮೃತ ದುರ್ದೈವಿಗಳು. ಇನ್ನು ದುರಂತ ಅಂದ್ರೆ, ಕೊರೊನಾ ಸೋಂಕಿಗೆ ಚಾಂದಿಬಾಯಿ ಹಿರಿಯ ಮಗ 9ದಿನಗಳ ಹಿಂದೆ ಬಲಿಯಾಗಿದ್ರು. ಸೋಂಕು ಕಾಣಿಸಿಕೊಂಡ ಬಳಿಕ ತಾಯಿ ಮಗ ಇಬ್ಬರೂ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

- Advertisement -

Latest Posts

Don't Miss