ತಾಯಿ ಕೊರೊನಾದಿಂದ ಸಾವು, ಇಡೀ ಕುಟುಂಬ ಆತ್ಮಹತ್ಯೆ

www.karnatakatv.net: ರಾಜ್ಯ- ಆನೇಕಲ್: ಹೆಮ್ಮಾರಿ ಕೊರೊನಾದಿಂದ ಜನಸಾಮಾನ್ಯರ ಬದುಕಿನಲ್ಲಿ ಬಿರುಗಾಳಿ ಬೀಸಿದೆ. ಅದೆಷ್ಟೋ ಕುಟುಂಬಗಳು ತಮ್ಮ ಪ್ರೀತಿ-ಪಾತ್ರರನ್ನ ಕಳೆದುಕೊಂಡು ಅನಾಥರಾಗಿದ್ದಾರೆ. ಇದೀಗ ಬೆಂಗಳೂರಿನ ಹೊರವಲಯದಲ್ಲಿ ಇಂತಹದೇ ಒಂದು ಮನಕಲುಕುವ ಘಟನೆ ಸಂಭವಿಸಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಅಪ್ಪ ಹಾಗೂ ಇಬ್ಬರು ಹೆಣ್ಣು ಮಕ್ಕಳು ನೇಣಿಗೆ ಶರಣಾಗಿದ್ದಾರೆ. ಸತೀಶ್ ರೆಡ್ಡಿ ಅವರ ಪತ್ನಿ ಆಶಾಗೆ ಕೊರೊನಾ ವೈರಸ್ ಅಪ್ಪಳಿಸಿತ್ತು. ಚಿಕಿತ್ಸೆ ಪಡೆದ್ರೂ ಚೇತರಿಸಿಕೊಳ್ಳದ ಆಶಾ ಮೇ 6ರಂದು ಸಾವನ್ನಪ್ಪಿದ್ರು. ಇದು ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಬರ ಸಿಡಿಲು ಬಡಿದಂತೆ ಆಯ್ತು. ಮನೆಯ ಒಡತಿಯಿಲ್ಲದೇ ಮನೆಯೇ ಸೊರಗಿತ್ತು. ದಿನಗಳು ಉರುಳಿದ್ರು, ಆಶಾರವರು ಇಲ್ಲದ ಬದುಕನ್ನ ಊಹಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ, ಮೂವರು ಖಿನ್ನತೆಗೊಳಗಾಗಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

About The Author