ಗಂಡನ ಪ್ರೀತಿ ಕಡಿಮೆಯಾಗಿದ್ದಕ್ಕೆ ಹೆತ್ತ ಮಗು ಬಾಯಿಗೆ ಟಿಶ್ಯೂ ತುರುಕಿ ಕೊಂದ ತಾಯಿ!

ತಮಿಳುನಾಡಿನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಒಂದು ನವಜಾತ ಶಿಶುವಿನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಕೇವಲ 40 ದಿನಗಳ ಮಗುವಿನ ಬಾಯಿನಲ್ಲಿ ತಾಯಿಯೇ ಟಿಶ್ಯೂ ಪೇಪರ್ ತುರುಕಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಭೀಕರ ಕೃತ್ಯ ಎಸಗಿರುವುದಾಗಿ ತಾಯಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಸಮೀಪದ ಬಾಲೂರ್ ಕಟ್ಟುವಿಲೈ ಪ್ರದೇಶದಲ್ಲಿ ನಡೆದಿದೆ. ಬಂಧಿತ ಮಹಿಳೆಯನ್ನು 20 ವರ್ಷದ ಬೆನಿತಾ ಜಯ ಅನ್ನಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಬೆನಿತಾ, ಒಂದು ವರ್ಷ ಹಿಂದೆ ದಿಂಡಿಗಲ್ ಜಿಲ್ಲೆಯ ನಾಗಕೋಣನೂರು ಪ್ರದೇಶದ 21 ವರ್ಷದ ಕಾರ್ತಿಕ್ ಎಂಬುವರೊಂದಿಗೆ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ 40 ದಿನಗಳ ಹಿಂದಷ್ಟೆ ಹೆಣ್ಣು ಮಗು ಜನಿಸಿತ್ತು.

ಮಗುವಿನ ಸಾವಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 9ರಂದು ಘಟನೆ ನಡೆದಿದೆ. ಕಾರ್ತಿಕ್, ತಮ್ಮ ದಿನನಿತ್ಯದ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ಮಗುವಿನಲ್ಲಿ ಯಾವುದೇ ಚಲನೆ ಇರದೆ ಉಸಿರಾಟವೂ ಇಲ್ಲದಿರುವುದನ್ನು ಗಮನಿಸಿದರು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ, ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ದೃಢಪಡಿಸಿದರು.

ಮಗುವಿನ ಸಾವಿನ ಬಗ್ಗೆ ಅನುಮಾನ ಹೊಂದಿದ ಕಾರ್ತಿಕ್, ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಆಸ್ಪತ್ರೆಯಿಂದ ಬಂದ ವರದಿಯಲ್ಲಿ ಮಗುವನ್ನು ಕೃತ್ಯಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಬಹಿರಂಗವಾಯಿತು. ಮಗುವಿನ ಬಾಯಿನಲ್ಲಿ ಟಿಶ್ಯೂ ಪೇಪರ್ ತುರುಕಲಾಗಿದ್ದದ್ದು ವರದಿಯಲ್ಲಿ ಉಲ್ಲೇಖವಾಗಿತದೆ.

ಪೋಲೀಸರು ತಕ್ಷಣವೇ ಬೆನಿತಾರನ್ನು ವಿಚಾರಣೆಗೂ ಒಳಪಡಿಸಿದರು. ವಿಚಾರಣೆಯ ಸಂದರ್ಭ, ಬೆನಿತಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನನ್ನ ಮಗು ಹುಟ್ಟಿದ ಬಳಿಕ ನನ್ನ ಗಂಡನ ಪ್ರೀತಿ ನನ್ನ ಮೇಲಿಂದ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದೆ. ಮನೆದಲ್ಲಿ ನಿತ್ಯದ ಕಲಹ ಇತ್ತು. ಕೋಪದಿಂದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿದೆ. ಗಂಡನ ಪ್ರೀತಿ ಕಮ್ಮಿಯಾಗಲು ಮಗು ಕಾರಣ ಎಂದು ಅನಿಸಿತ್ತು. ಪೊಲೀಸರ ಮುಂದೆ ಬೆನಿತಾ ತಪ್ಪೊಪ್ಪಿಕೊಂಡಿದ್ದಾಳೆ.

ವರದಿ : ಲಾವಣ್ಯ ಅನಿಗೋಳ

About The Author