ಮಗನ ನೆನಪಿಂದ ಭಾರವಾಯ್ತಾ? 80 ಕೋಟಿ ಮನೆ! ನೋವಿನಲ್ಲಿ ಗುಡಿಸಲು ಸೇರಿದ ಅಮ್ಮ!

ಚೆನ್ನೈ: ಪೋಷಕರ ಬದುಕಿನಲ್ಲಿ ಮಕ್ಕಳ ಅಗಲಿಕೆ ಯಾವಾಗಲೂ ಅತಿದೊಡ್ಡ ನೋವು ಎಂಬುದಕ್ಕೆ ಹೃದಯವಿದ್ರಾವಕ ಉದಾಹರಣೆಯಾಗಿ ನಟ ಡೇನಿಯಲ್ ಬಾಲಾಜಿ ಅವರ ಕುಟುಂಬದ ಕಥೆ ಹೊರಬಂದಿದೆ. ಅವರ ನಿಧನದ ನಂತರ ತಾಯಿ ರಾಜಲಕ್ಷ್ಮಿ ಅವರು ಮಗ ಕಟ್ಟಿಸಿದ್ದ 80 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ತೊರೆದು, ಸರಳ ಬದುಕಿಗೆ ಮರುಳಿರುವುದು ಭಾವನಾತ್ಮಕ ಚರ್ಚೆಗೆ ಕಾರಣವಾಗಿದೆ.

ಕನ್ನಡ–ತಮಿಳು ಚಿತ್ರರಂಗದಲ್ಲಿ ಗುರುತು ಮೂಡಿಸಿದ್ದ ನಟ ಡೇನಿಯಲ್ ಬಾಲಾಜಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಯಶ್ ಅಭಿನಯದ ‘ಕಿರಾತಕ’ ಚಿತ್ರ ಸೇರಿದಂತೆ ಹಲವಾರು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೂ ಪರಿಚಿತರಾಗಿದ್ದರು. ‘ಶಿವಾಜಿನಗರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಪಾತ್ರಗಳು ಗಮನ ಸೆಳೆದಿದ್ದವು.

2024ರಲ್ಲಿ ಕೇವಲ 48ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಟ ಡೇನಿಯಲ್ ಬಾಲಾಜಿ ನಿಧನರಾಗಿದ್ದರು. ಅವರ ಅಕಾಲಿಕ ಅಗಲಿಕೆ ಚಿತ್ರರಂಗ ಹಾಗೂ ಕುಟುಂಬಕ್ಕೆ ದೊಡ್ಡ ಆಘಾತವನ್ನು ತಂದಿತ್ತು.

ಮಗನ ಪ್ರೀತಿಯಿಂದಲೇ ಚೆನ್ನೈನಲ್ಲಿ ಸುಮಾರು ₹80 ಕೋಟಿ ವೆಚ್ಚದಲ್ಲಿ ಅದ್ದೂರಿ ಬಂಗಲೆ ನಿರ್ಮಿಸಿದ್ದ ಡೇನಿಯಲ್ ಬಾಲಾಜಿ, ತಮ್ಮ ತಾಯಿ ರಾಜಲಕ್ಷ್ಮಿ ಅವರಿಗಾಗಿ ಆ ಮನೆಯನ್ನು ನೀಡಿದ್ದರು. ಆದರೆ ಮಗನ ಸಾವಿನ ನಂತರ ಆ ಮನೆಯಲ್ಲಿ ಪ್ರತಿಯೊಂದು ಮೂಲೆ ಮಗನ ನೆನಪನ್ನು ಕಾಡುತ್ತಿದ್ದ ಕಾರಣ, ತೀವ್ರ ದುಃಖದಲ್ಲಿರುವ ತಾಯಿ ಆ ಬಂಗಲೆಯನ್ನು ತೊರೆದು ಹೊರ ಬಂದಿದ್ದಾರೆ.

ಇದೀಗ ರಾಜಲಕ್ಷ್ಮಿ ಅವರು ಚೆನ್ನೈನ ಆವಡಿಯಲ್ಲಿರುವ ದೇವಸ್ಥಾನದ ಸಮೀಪದ ಒಂದು ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಕೋಟಿ ಮೌಲ್ಯದ ಬಂಗಲೆಯನ್ನು ಬಿಟ್ಟು ಸರಳ ಬದುಕು ಆರಿಸಿಕೊಂಡಿರುವ ಈ ನಿರ್ಧಾರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಯಶಸ್ಸಿನ ಶಿಖರಕ್ಕೇರಿದ ನಟನೊಬ್ಬ ತನ್ನ ತಾಯಿಗಾಗಿ ಕಟ್ಟಿಸಿದ ಐಶಾರಾಮಿ ಬಂಗಲೆ, ಇಂದು ನೆನಪುಗಳ ಭಾರದಿಂದ ಬಿಟ್ಟುಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಘಟನೆ ಚಿತ್ರರಂಗದಲ್ಲಿ ಮಾತ್ರವಲ್ಲ, ಅಭಿಮಾನಿಗಳಿಗೂ ನೋವನ್ನುಂಟುಮಾಡಿದೆ.

About The Author