ಪತಿಯ ಕಿರುಕುಳ ತಾಳಲಾರದೆ ತನ್ನ ಆರೂ ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ್ದಾಳೆ ಇಲ್ಲೊಬ್ಬ ಕ್ರೂರಿ ತಾಯಿ! ಇಂಥದ್ದೊಂದು ಭಯಾನಕ ಘಟನೆ ನಡೆದಿರೋದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ. 30 ವರ್ಷದ ಆರು ಮಕ್ಕಳ ಮಹಾ ತಾಯಿ ಇಂಥಹ ಘನಘೋರ ಕೃತ್ಯ ಎಸಗಿದ್ದಾಳೆ ನೋಡಿ.
ಬಾವಿಗೆ ಎಸೆಯುವಾಗ ಮಕ್ಕಳು ಕಾಡಿದರೂ, ಬೇಡಿದರೂ ಕೂಗಾಡಿದರೂ ಸಹ ಹೆತ್ತ ಕರುಳು ಕಲ್ಲಾಗಿಯೇ ಹೋಗಿತ್ತು.ಅಮ್ಮ ಸಾಯಿಸಬೇಡಮ್ಮಾ ಎಂದು ಮಕ್ಕಳು ಗೋಗರೆಯುತ್ತಿದ್ದರೂ, ಅಮ್ಮನ ಹೃದಯ ಕರಗಲೇ ಇಲ್ಲ. ಆರು ಮಕ್ಕಳನ್ನು ಕೂಡ ಆಕೆ ಸಾಯಿಸಿದ್ದಾಳೆ! ಸತ್ತ ಮಕ್ಕಳೆಲ್ಲ 18 ತಿಂಗಳದಿಂದ 10 ವರ್ಷದ ಒಳಗಿನವರು ಎನ್ನಲಾಗಿದೆ.
ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಬಿದ್ದ ಮಕ್ಕಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತಿದ್ದುದು ಎಂಥವರ ಹೃದಯವನ್ನೂ ಚುರುಕ್ ಎನ್ನುವಂತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಬಂದು, ಮಕ್ಕಳನ್ನು ರಕ್ಷಿಸುವ ಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಬಾವಿಯಲ್ಲಿ ಮುಳುಗಿ, ಪ್ರಾಣ ಬಿಟ್ಟಿದ್ದಾರೆ.
ರಕ್ಷಣಾ ತಂಡಗಳು ಮಕ್ಕಳ ಶವಗಳನ್ನು ಬಾವಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.