Tuesday, April 15, 2025

Latest Posts

ಕುಡಿದ ಮತ್ತಿನಲ್ಲಿ ಹೆತ್ತ ಮಗಳಂತಾನು ನೋಡದೆ ಹತ್ಯೆಗೈದ ಪಾಪಿ ತಂದೆ

- Advertisement -

ಪಾಟ್ನಾ: ತಂದೆಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಮೂರು ವರ್ಷದ ಮಗಳನ್ನು ಕೊಲೆ ಮಾಡಿದ ಘಟನೆ ಮೋತಿಹಾರಿಯ ಗಾಯತ್ರಿನಗರ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಬಿನೋದ್ ಎಂಬಾತ ತನ್ನ ಪತ್ನಿಯೊಂದಿಗಿನ ಕ್ಷುಲ್ಲಕ ಜಗಳಕ್ಕೆ ತನ್ನ ಮಗಳು ಬೇಬಿ ಕುಮಾರಿಯನ್ನು ನೆಲದ ಮೇಲೆ ಹೊಡೆದು ಕೊಂದಿದ್ದಾನೆ. ಬಿನೋದ್ ಆಟೋ ರಿಕ್ಷಾ ಚಾಲಕನಾಗಿದ್ದು, ಆಗಾಗ್ಗೆ ಕುಡಿದ ಅಮಲಿನಲ್ಲಿ ಕೆಲಸದಿಂದ ಮನೆಗೆ ಹಿಂತಿರುಗಿ ಬಂದು ಅವಳನ್ನು ಹೊಡೆಯುತ್ತಿದ್ದ ಎಂದು ಸಂತ್ರಸ್ತೆಯ ತಾಯಿ ಬಹಿರಂಗಪಡಿಸಿದ್ದಾರೆ.

ನಿನ್ನೆ ರಾತ್ರಿ ಮನೆಗೆ ಬಂದ ಆತ ಕುಡಿದ ಅಮಲಿನಲ್ಲಿ ಪತ್ನಿಗೆ ಥಳಿಸಲು ಆರಂಭಿಸಿದ್ದ. ಈ ವೇಳೆ ಪತ್ನಿಯು  ಹೆಚ್ಚು ಕುಡಿಯಬೇಡಿ ಎಂದು ಹೇಳಿದ್ದಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾನೆ.

ಅಷ್ಟರಲ್ಲಿ ಪೊಲೀಸರಿಗೆ ಕೊಲೆಯ ಬಗ್ಗೆ ಸುಳಿವು ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಅಪ್ರಾಪ್ತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

- Advertisement -

Latest Posts

Don't Miss