Monday, December 23, 2024

Latest Posts

ಮೊಟೊರೊಲಾ ಎಡ್ಜ್‌ 30 ಫ್ಯೂಷನ್ ಸ್ಮಾರ್ಟ್‌ಫೋನ್‌ ಬಿಡುಗಡೆ

- Advertisement -

Technology News:

ಇದೀಗ ಹೊಸದಾಗಿ ಮೊಟೊರೊಲಾ ಎಡ್ಜ್‌ 30 ಫ್ಯೂಷನ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಫೋನ್ ಫ್ಲ್ಯಾಗ್‌ಶಿಫ್‌ ಮಾದರಿಯ ಫೋನ್‌ ಆಗಿದ್ದು, ಆಕರ್ಷಕ ಕ್ಯಾಮೆರಾ, ಅಧಿಕ ಪ್ರೊಸೆಸರ್‌ ಹಾಗೂ ಬಿಗ್‌ ಬ್ಯಾಟರಿ ಗಳಂತಹ ಕೆಲವು ಪ್ರಯೋಜನಗಳೊಂದಿಗೆ ಲಗ್ಗೆ ಇಟ್ಟಿದೆ. ಈ ಸ್ಮಾರ್ಟ್‌ಫೋನಿನ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ ಒಳಗೊಂಡಿದ್ದು ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಹಾಗೆಯೇ ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್‌ 30 ಫ್ಯೂ‍ಷನ್‌ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ pOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಜೊತೆಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ.ಮೊಟೊರೊಲಾ ಎಡ್ಜ್‌ 30 ಫ್ಯೂ‍ಷನ್‌ ಫೋನ್ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ ಒಳಗೊಂಡಿದ್ದು ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ.

ಮೊಟೊರೊಲಾ ಎಡ್ಜ್‌ 30 ಫ್ಯೂಷನ್‌ ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಅನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್‌ಫೋನ್‌ 33W ಟರ್ಬೊ ಚಾರ್ಜಿಂಗ್‌ ಬೆಂಬಲಿಸುವ 4,400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 68W ಟರ್ಬೋ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.

ಭಾರತದಲ್ಲಿ ಮೊಟೊರೊಲಾ ಎಡ್ಜ್ 30 ಫ್ಯೂಷನ್ ಫೋನ್ 8GB RAM + 128GB ಸ್ಟೋರೇಜ್‌ ವೇರಿಯಂಟ್‌ 42,999 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ ಕಾಸ್ಮಿಕ್ ಗ್ರೇ ಮತ್ತು ಸೋಲಾರ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಈ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 39,999 ರೂ. ಗಳ ವಿಶೇಷ ಬೆಲೆಗೆ ಲಭ್ಯವಾಗಲಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಫೀಚರ್ಸ್  :ಈ ಫೋನ್ 200 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888+ SoC ಪ್ರೊಸೆಸರ್‌ ಅನ್ನು ಪಡೆದಿರುವುದು ಪ್ರಮುಖ ಹೈಲೈಟ್‌ ಎನಿಸಿದೆ. ಇನ್ನು ಈ ಫೋನಿನ 8GB RAM + 128 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 59,999ರೂ. ಎಂದು ತಿಳಿದು ಬಂದಿದೆ.

- Advertisement -

Latest Posts

Don't Miss