Wednesday, August 20, 2025

Latest Posts

ಮೊಟ್ಟೆ ಸಂಪತ್ ಗೆ ಬಂಧಿಸಿದ 8 ಗಂಟೆಯಲ್ಲೇ ಜಾಮೀನು

- Advertisement -

ಮಡಿಕೇರಿ: ಮಾಜಿ ಸಿಎಂ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ್ದಂತ ಸಂಪತ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧಿತ ಆರೋಪಿ ಸಂಪತ್ ಗೆ 8 ಗಂಟೆಯಲ್ಲೇ ಜಾಮೀನು ದೊರೆತಂತೆ ಆಗಿದೆ.

ಕೊಡಗು ಪ್ರವಾಸದ ವೇಳೆ ಸಿದ್ಧರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಸಂಪತ್, ಮೊಟ್ಟೆ ಎಸೆದಿದ್ದನು. ಈ ಬಗ್ಗೆ ಪ್ರತಿಕ್ರಿಯಿಸಿದ್ದನಂತ ಆತ, ಹಿಂದೂಗಳ ಬಗ್ಗೆ ಸಿದ್ಧರಾಮಯ್ಯ ಕೇವಲವಾಗಿ ಮಾತನಾಡಿದ್ದು, ದನದ ಮಾಂಸ ತಿನ್ನುತ್ತಾರೆ ಎಂಬುದಾಗಿ ಹೇಳಿದ್ದಕ್ಕೆ ಕೋಪಗೊಂಡು ಹಾಗೆ ಮಾಡಿದ್ದಾಗಿ ಹೇಳಿದ್ದನು.

ಈ ಪ್ರಕರಣದಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಸಂಪತ್ ಬಂಧಿಸಿದ್ದರು. ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ಮಧ್ಯೆ ಕುಶಾಲನಗರ ಜೆಎಂಎಫ್ ಸಿ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

- Advertisement -

Latest Posts

Don't Miss