Thursday, August 7, 2025

Latest Posts

ನನ್ನ ಸಾವಿಗೆ ಸಂಸದರೇ ಕಾರಣ – ಡಾ. ಕೆ ಸುಧಾಕರ್‌ಗೆ ಸಂಕಷ್ಟ, ಡಿಸಿ ಕಚೇರಿ ಎದುರೇ ಕಾರು ಚಾಲಕ ಆತ್ಮಹತ್ಯೆ!

- Advertisement -

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್‌ನಲ್ಲಿ ಸಂಸದ ಡಾ.ಕೆ.ಸುಧಾಕರ್ ಮತ್ತು ಅವರ ಬೆಂಬಲಿಗರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

33 ವರ್ಷದ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕರಾಗಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅವರು ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದ್ದಾರೆ.

ಘಟನೆ ಸ್ಥಳಕ್ಕೆ ತಕ್ಷಣವೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಬಾಬು ಅವರು ಒಂದು ಡೆತ್ ನೋಟ್ ಬರೆದಿದ್ದಾರೆ. ಆ ಪತ್ರದಲ್ಲಿ ಅವರು ತಮ್ಮ ಆತ್ಮಹತ್ಯೆಗೆ ಕಾರಣವಾದವರು ಸಂಸದ ಡಾ.ಕೆ.ಸುಧಾಕರ್, ನಾಗೇಶ್ ಎನ್. ಮತ್ತು ಮಂಜುನಾಥ್ ಎಂಬವರನ್ನು ನೇರವಾಗಿ ಆರೋಪಿಸಿದ್ದಾರೆ.

ಡೇಟ್ ನೋಟ್ ಅಲ್ಲಿ ಬರೆದದ್ದು ಏನು ಅನ್ನೋದನ್ನ ನೋಡೋದಾದ್ರೆ.. ಸುಧಾಕರ್ ಅವರು ಸಚಿವರಾಗಿದ್ದ ವೇಳೆ, ಅವರ ಬೆಂಬಲಿಗರಾದ ನಾಗೇಶ್ ಮತ್ತು ಮಂಜುನಾಥ್ ನನ್ನಿಂದ ₹40 ಲಕ್ಷ ಕೇಳಿದ್ದರು. ನಾನು ನನ್ನ ಬಳಿ ಇದ್ದ ಹಣದ ಜೊತೆಗೆ ಇನ್ನೂ ಸಾಲ ಮಾಡಿಸಿಕೊಂಡು ₹25 ಲಕ್ಷ ಕೊಟ್ಟಿದ್ದೆ.

ಅವರು ನನಗೆ ಖಾಯಂ ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ ಹಣ ತೆಗೆದುಕೊಂಡು, ನಾನು ಅವರ ಸಂಪರ್ಕಕ್ಕೆ ಹೋದಾಗ ನನಗೆ ತಿರುಗಿ ನೋಡಲಿಲ್ಲ. ನಾನು ಹಲವಾರು ಬಾರಿ ಅವರ ಬಳಿ ಹೋದರೂ ಯಾವುದೇ ಸ್ಪಂದನೆ ಇರಲಿಲ್ಲ. ಕೆಲಸವು ಕೊಡಿಸಲಿಲ್ಲ ಅಂತ ಬರೆದಿದ್ದಾರೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾನೂನು ಪ್ರಕಾರ ತನಿಖೆಯಾಗಲಿ ಎಂದು ಸಂಸದ ಡಾ.ಕೆ ಸುಧಾಕರ್ ಅವರು ಒತ್ತಾಯಿಸಿದ್ದಾರೆ. ಆಪ್ತರ ಮೇಲೆ ಕೇಳಿ ಬಂದಿರುವ ಗಂಭೀರ ಆರೋಪದಿಂದ ಬಿಜೆಪಿ ಸಂಸದ ಸುಧಾಕರ್ ಅವರಿಗೆ ಸಂಕಷ್ಟ ಎದುರಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss