Sunday, March 3, 2024

Latest Posts

‘ದೇವೇಗೌಡ್ರು ಸೋತರೆ ಚುನಾವಣೆ ಬರುತ್ತಾ..?’- ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ

- Advertisement -

ಚಾಮರಾಜನಗರ: ಮಧ್ಯಂತರ ಚುನಾವಣೆ ಎದುರಾಗೋದ್ರಲ್ಲಿ ಸಂಶಯವೇ ಇಲ್ಲ ಅಂತ ಹೇಳಿದ್ದ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರಿಗೆ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಂಸದ ಶ್ರೀನಿವಾಸಪ್ರಸಾದ್, ದೇವೇಗೌಡರು ಗೆದ್ದಾರ ಒಂದು ರೀತಿ, ಸೋತಾಗ ಮತ್ತೊಂದು ರೀತಿ ಮಾತನಾಡ್ತಾರೆ. ದೇವೇಗೌಡ ಮತ್ತು ಮಗ ಕುಮಾರಸ್ವಾಮಿ ಏನ್ ಹೇಳ್ತಾರೋ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಒಂದೆಡೆ ಮಗ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡ್ತಾರೆ, ಮತ್ತೊಂದೆಡೆ ದೇವೇಗೌಡ್ರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡ್ತಾರೆ. ಅವರ ಮಾತುಗಳೇ ಅರ್ಥವಾಗಲ್ಲ ಅಂತ ವ್ಯಂಗ್ಯವಾಡಿದ್ರು. ಅಲ್ಲದೆ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಬೇಕಾದರೆ ಸಾಕಷ್ಟು ಬೆಳವಣಿಗೆಗಳು ಆಗಬೇಕು. ದೇವೇಗೌಡರು ಸೋತರೆ ಮಧ್ಯಂತರ ಚುನಾವಣೆ ಬರುತ್ತಾ ಅಂತ ಪ್ರಶ್ನಿಸೋ ಮೂಲಕ ಸಂಸದ ಶ್ರೀನಿವಾಸ ಪ್ರಸಾದ್ ಟಾಂಗ್ ನೀಡಿದ್ದಾರೆ.

ಯಾದಗಿರಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ ಸಿಎಂ ಕೊಟ್ಟ ಬಂಪರ್ ಆಫರ್ ಏನ್ ಗೊತ್ತಾ..? ತಪ್ಪದೇ ಈ ವಿಡಿಯೋ ನೋಡಿ

https://www.youtube.com/watch?v=3KeJni-Pkb8

- Advertisement -

Latest Posts

Don't Miss