ನವದೆಹಲಿ: ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೂ ಸುಮಲತಾ ಸದಾ ಮಂಡ್ಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.ಈ ನಿಟ್ಟಿನಲ್ಲಿ ಕ್ಷೇತ್ರದ ಯೋಜನೆಗಳ ವ್ಯಾಪ್ತಿಗೆ ಬರುವ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇಂದು ನವದಹೆಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್ ಮಂಡ್ಯದ ಹಲವಾರು ಯೋಜನೆಗಳಿಗೆ ಅಗತ್ಯ ನೆರವು ಕೋರಿದ್ರು. ಅಲ್ಲದೆ ಮಂಡ್ಯದಲ್ಲಿ ಸಂಚರಿಸೋ ರೈಲುಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಭೋಗಿಗಳ ವ್ಯವಸ್ಥೆ ಕಲ್ಪಿಸೋದಕ್ಕಾಗಿ ಪಿಯೂಷ್ ಗೋಯಲ್ ರವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರೋ ಕೇಂದ್ರ ಸಚಿವರ ಈ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡೋದಾಗಿ ಸುಮಲತಾರಿಗೆ ತಿಳಿಸಿದ್ದಾರೆ.
ಆ್ಯಂಬುಲೆನ್ಸ್ ಗಳಿಗೆ ದಾರಿ ಬಿದಿದ್ರೆ ನೀವು ಖಂಡಿತಾ ದಂಡ ತೆರಬೇಕಾಗುತ್ತೆ..!! ಮಿಸ್ ಮಾಡದೇ ಈ ವಿಡಿಯೋ ನೋಡಿ