Saturday, July 5, 2025

Latest Posts

‘ಮೈಷುಗರ್ ಆರಂಭದ ವಿಚಾರದಲ್ಲಿ ಅಡ್ಡಿಯಾಗೋರಿಗೆ ರೈತರ ಶಾಪ ತಟ್ಟುತ್ತೆ’

- Advertisement -

ಮಂಡ್ಯ: ಮಂಡ್ಯದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಹೇಳಿಕೆ ನೀಡಿದ್ದು, ಮೈಷುಗರ್ ಆರಂಭದ ವಿಚಾರದಲ್ಲಿ ಅಡ್ಡಿಯಾಗೋರಿಗೆ ರೈತರ ಶಾಪ ತಟ್ಟುತ್ತೆ ಎಂದಿದ್ದಾರೆ.

https://youtu.be/7GStfT4rX2k

ಕಾರ್ಖಾನೆ ಅಡ್ಡಿಪಡಿಸ್ತಿರೋ ಜಿಲ್ಲೆಯ ಜೆಡಿಎಸ್ ಶಾಸಕರ ವಿರುದ್ದ ಸಂಸದೆ ಆಕ್ರೋಶ ಹೊರಹಾಕಿದ್ದು, ರೈತ ವಿಷಯದಲ್ಲಿ ಸ್ವಾರ್ಥದ ರಾಜಕಾರಣ ಮಾಡ್ತಿರೋರಿಗೆ ಆ ದೇವರು ಕ್ಷಮಿಸಲ್ಲ, ರೈತರು ಕ್ಷಮಿಸಲ್ಲ. ಈ ಹಿಂದೆ ಅವರದ್ದೆ ಸರ್ಕಾರ ವಿದ್ದಾಗ ಅವ್ರೆ O&Mಗೆ ಒಪ್ಪಿಗೆ ಕೊಟ್ಟಿದ್ರು. ಈಗ ಸರ್ಕಾರ ಬದಲಾಗ್ತಿದ್ದಂತೆ ವಿರೋಧ ವ್ಯಕ್ತಪಡಿಸ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕಾರ್ಖಾನೆ ಈ ಸರ್ಕಾರದ ಅವಧಿಯಲ್ಲಿ ಓಪನ್ ಆದ್ರೆ ಆ ಕ್ರೆಡಿಟ್ ಈಗೀನ ಸರ್ಕಾರಕ್ಕೆ ಹೋಗುತ್ತೆ ಅಂತಾ ಅವರಿಗೆ ಭಯ. ಅದಕ್ಕಾಗಿ ಅವರ ಎದೆಯಲ್ಲಿ ಢವಢವದ ಆತಂಕ ಶುರುವಾಗಿದೆ. ಸಂಸದರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಲಾಭಿ ಮಾಡ್ತಿದ್ದಾರೆ ಅಂತಿರೋದು ಹಾಸ್ಯಾಸ್ಪದ. ಒಂದು ಒಳ್ಳೆ ಉದ್ದೇಶ ಇಟ್ಕೊಂಡು ಕೆಲಸ ಮಾಡಿದ್ರೆ ಈ ರೀತಿ ಆರೋಪ ಮಾಡ್ತಾರೆ. ಈಗ ಬೇಡ ಅಂತಿರೋ ಇವರ ಹಿಂದಿನ ದುರದ್ದೇಶ ಗೊತ್ತಾಗುತ್ತೆ ಎಂದು ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸ್ತಿರೋ ಜೆಡಿಎಸ್ ಶಾಸಕರಿಗೆ ಸುಮಲತಾ ಪರೋಕ್ಷ ಟಾಂಗ್ ನೀಡಿದ್ದಾರೆ.

- Advertisement -

Latest Posts

Don't Miss