- Advertisement -
ಬೆಂಗಳೂರು: ಕೆಲ ದಿನಗಳಿಂದ ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರಿಗೆ ಸಂಸದೆ ಸುಮಲತಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ಸಂಸದೆ ಸುಮಲತಾ, ನಾನು ಪದೇ ಪದೇ ಹೇಳುತ್ತಿದ್ದೇನೆ, ನನ್ನ ಬಗ್ಗೆ ಸುಳ್ಳು ಸುದ್ದಿ ಹರಿಬಿಡುತ್ತಿರೋದನ್ನು ಈಗಲೇ ನಿಲ್ಲಿಸಿ. ಇಲ್ಲದಿದ್ರೆ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆ ಅಂತ ಖಡಕ್ ವಾರ್ನಿಂಗ್ ನೀಡಿದ್ದಾರೆ. ನನ್ನ ಮೇಲಿನ ಹೊಟ್ಟೆಕಿಚ್ಚು ಹಾಗೂ ಹತಾಶರಾಗಿರೋ ಕೆಲ ಕಿಡಿಗೇಡಿಗಳು ಈ ಕೃತ್ಯವೆಸಗುತ್ತಿದ್ದಾರೆ. ಇಂಥಹ ಸುದ್ದಿ ಏನಾದ್ರೂ ನಿಮ್ಮ ಗಮನಕ್ಕೆ ಬಂದ್ರೆ ಅವರನ್ನು ಸುಮ್ನನೆ ಬಿಡಬೇಡಿ ಅಂತ ತಮ್ಮ ಅಭಿಮಾನಿಗಳಿಗೆ ಸುಮಲತಾ ಟ್ವಿಟ್ಟರ್ ಮೂಲಕ ಕರೆ ನೀಡಿದ್ದಾರೆ.
ಅಂದಹಾಗೆ ಸಿಎಂ ಕುಮಾರಸ್ವಾಮಿಗೆ ಟೆನ್ಶನ್ ಕೊಡ್ತೀರೋದ್ಯಾರು..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -