ಕಳೆದ ಕೆಲವು ತಿಂಗಳುಗಳಿಂದ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ.
ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಕೂಡ ಸಂಗಮದ ಪೀಠಾಧಿಪತಿಗಳಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹಲವು ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ
ಪ್ರತಿಭಟನೆ ನಡೆಸಿದರು.ನಂತರ ಪ್ರತಿಭಟನೆ ಹತ್ತಿಕ್ಕಲು 2ಎ ಮೀಸಲಾತಿ ಹೋರಡಿಸಿದರು. ಆದರೆ ಪ್ರತಿಭಟನಾಕಾರರು ನಮಗೆ ಶೇಕಡಾವಾರು ಮೀಸಲಾತಿ ನೀಡಿರುವ ಬಗ್ಗೆ ಸರಿಯಾದ ಮಾಹಿತಿ ನೀಡಿ ಈ ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಮಾಹಿತಿ ನೀಡಭೆಕು ಇಲ್ಲದಿದ್ದರೆ ನಾವು ಜನವರಿ 13 ರಂದು ಸಿಎಂ ತವರೂರಾದ ಶಿಗ್ಗಾಂವಿಯ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದರು.
ಆದರೆ ಎಚ್ಚೆತ್ತುಕೊಳ್ಳದ ಮುಖ್ಯಮಂತ್ರಿ ಆದರು ನಿರಾಕರಿಸಿದರು ಮೃತ್ಯುಂಜಯ ಸ್ವಾಮಿ ನೇತೃತ್ವದ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಜನವರಿ 13 ರಂದು ಮನೆಗೆ ಮುತ್ತಿಗೆ ಹಾಕಿದ್ದಾರು ನಂತರ ನಮ್ಮ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ ನಾಳೆಯಿಂದ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತೇವೆ ಎಂದಿದ್ದರು ಅದೇ ರೀತಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ ಈ ಪ್ರತಿಭಟನೆಗೆ ಬೆಂಬಲ ನೀಡಲು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿ ಬೆಂಬಲ ನೀಡಿದರು .ಆಗ ಯತ್ನಾಳ್ ಅವರು ಕುರಿತು ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿಗಳ ಯತ್ನಾಳ್ ರು ಹುಲಿ ಇದ್ದಹಾಗೆ ಏನೇ ಮಾತನಾಡುವುದಿದ್ದರೆ ಹುಲಿ ಜೊತೆ ಮಾತನಾಡಿ ಎನ್ನುವ ಮೂಲಕ ಯತ್ನಾಳ್ ರನ್ನು ಹುಲಿಗೆ ಹೋಲಿಸಿದ್ದಾರೆ
ರೈತರಿಗಾಗಿ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗುತ್ತಿದೆ ‘ಪ್ರಜಾರಾಜ್ಯ’ದ ಸುಂದರ ರೈತ ಗೀತೆ