ಕರ್ನಾಟಕ ಟಿವಿ : ಕಳೆದ ಆರೇಳು ತಿಂಗಳ ಹಿಂದೆ 17 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಕುಮಾರಸ್ವಾಮಿ ಸರ್ಕಾರ ಪತನವಾಯ್ತು.. ಸರ್ಕಾರ ಪತನಕ್ಕೂ ಮುನ್ನ 17 ಶಾಸಕರು ಅನರ್ಹರಾದಾಗ ಬಿಜೆಪಿ ನಾಯಕರು ಅವರನ್ನ ಚಿನ್ನ, ರನ್ನ, ಬಂಗಾರ ಅಂತ ಹೊಗಳುತ್ತಿದ್ರು.. ಸಿಎಂ ಯಡಿಯೂರಪ್ಪ ಯಾವುದೇ ಕಾರಣಕ್ಕೂ 17 ಜನರನ್ನ ಕೈಬಿಡೋದಿಲ್ಲ ಅಂತ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ರು.. ಆದ್ರೆ, ಯಾವಾಗ ಉಪಚುನಾವಣೆ ಘೋಷಣೆ ಆಯ್ತೋ ಆವಾಗ ಬಿಜೆಪಿಯ ಚಿನ್ನ, ಬಂಗಾರದ ಸಂಖ್ಯೆ 17ರಿಂದ 13ಕ್ಕೆ ಕುಸಿಯಿತು.. ಶಿವಾಜಿನಗರದ ರೋಷನ್ ಬೇಗ್, ರಾಣೆಬೆನ್ನೂರಿನ ಶಂಕರ್ ಗೆ ಟಿಕೆಟ್ ನಿರಾಕರಿಸಿದ್ರೆ, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ, ಮಸ್ಕಿ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಗೆ ಬಿಜೆಪಿ ನಾಯಕರೇ ಮುಳುವಾಗಿ ಚುನಾವಣೆ ನಡೆಯದಿರಲು ಕಾರಣರಾದ್ರು.. ನಂತರ ಕೆಲ ಅನರ್ಹ ಶಾಸಕರಿಗೆ ಬಿಜೆಪಿ ನಾಯಕರು ಮೂರೇ ತಿಂಗಳಿಗೆ ಸಾಕಪ್ಪ ಸಾಕು ಅನ್ನುವ ರೀತಿ ಮಾಡಿಬಿಟ್ರು.. ಇನ್ನು ಉಪಚುನಾವಣೆಯಲ್ಲಿ ಗೆದ್ದ ಎಲ್ಲರೂ ಸಂಫುಟ ಸೇರ್ತಾರೆ ಅಂತ ಯಡಿಯೂರಪ್ಪ ಪ್ರಚಾರ ಮಾಡಿದ್ರು.. ಗೆದ್ದ ಮೇಲೆ ಸಹ ಎಲ್ಲರಿಗೂ ಸಚಿವ ಸ್ಥಾನ ಕೊಡ್ತೀನಿ ಅಂತ ರಾಜಾಹುಲಿ ಹೇಳಿದ್ರು.. ಆದ್ರೆ, ಚುನಾವಣೆಯಲ್ಲಿ ಸೋತ ವಿಶ್ವನಾಥ್ , ಹೊಸಕೋಟೆಯ ಎಂಟಿಬಿ ನಾಗರಾಜ್ ಗೆ ಫಲಿತಾಂಶ ಬಂದ ಮರುಕ್ಷಣದಿಂದ ಕಹಿಯಾಗಿಬಿಟ್ರು.. ನನ್ನನ್ನ ಮಂತ್ರಿ ಮಾಡದಿದ್ರೂ ಪರವಾಗಿಲ್ಲ ನನ್ನ ಸೋಲಿಗೆ ಕಾರಣವಾದ ಸಂಸದ ಬಚ್ಚೇಗೌಡರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಅಂತ ಎಷ್ಟೇ ಹೇಳಿದ್ರು ಯಡಿಯೂರಪ್ಪ ಕ್ಯಾರೆ ಅನ್ನಲಿಲ್ಲ.. ಇನ್ನು ಕೆಲ ದಿನಗಳಿಂದ ಉಪಚುನಾವಣೆಯಲ್ಲಿ ಗೆದ್ದು ಅರ್ಹರಾಗಿರುವ ಎಲ್ಲಾ ಶಾಸಕರನ್ನೂ ಯಡಿಯೂರಪ್ಪ ಮಂತ್ರಿ ಮಾಡ್ತೀವಿ ಅನ್ನೋ ಮೂಲಕ ಸೋತ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಗೆ ಶಾಕ್ ನೀಡಿದ್ರು.. ಎರಡ್ಮೂರು ದಿನಗಳಿಂದ ಗೆದ್ದವರಲ್ಲಿಕೇವಲ 7-8 ಮಂದಿಯನ್ನ ಮಾತ್ರ ಸಚಿವರನ್ನಾಘಿ ಮಾಡಲಾಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ.. ಈ ನಡುವೆ ಸೋತರು ವಿಶ್ವನಾಥ್ ಹಾಗೂ ಎಂಟಿಬಿಯನ್ನ ಮಂತ್ರಿ ಮಾಡಬೇಕು ಅಂತ ಮುಂಬೈ ಟೀಂ ಶಾಸಕರು ಹೇಳ್ತಿದ್ರು.. . ಆದ್ರೀಗ ಎಸ್.ಟಿ ಸೋಮಶೇಖರ್, ಡಾ. ಕೆ ಸುಧಾಕರ್ ಉಲ್ಟಾ ಹೊಡೆದಿದ್ದಾರೆ.. ಗೆದ್ದವರಿಗೆ ಮಾತ್ರ ಮಂತ್ರಿಗಿರಿ ಅನ್ನುವ ಮೂಲಕ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಮುಂಬೈಗೆ ತೆರಳಿದ್ದ ರೆಬೆಲ್ಸ್ ಶಾಸಕರ ನಾಯಕ ಹೆಚ್. ವಿಶ್ವನಾಥ್ ಗೆ ಶಾಕ್ ನೀಡಿದ್ದಾರೆ.. ನೀವು ಚುನಾವಣೆಗೆ ನಿಲ್ಲಬೇಡಿ ನಿಂತ್ರೆ ಸೋಲ್ತೀರಾ.. ಎಂಎಲ್ ಸಿ ಮಾಡಿ ಮಂತ್ರಿ ಮಾಡ್ತೀವಿ ಅಂತ ಎಷ್ಟು ಹೇಳಿದ್ರು ವಿಶ್ವನಾಥ್ ಕೇಳಲಿಲ್ಲ. ಈಗ ನಾವು ಬಿಜೆಪಿ ಶಾಸಕರು ನಮ್ಮ ಹೈಕಮಾಂಡ್ ಮಾತಿಗೆ ನಾವು ಬದ್ಧಅಂತ ಅರ್ಹ ಶಾಸಕರು ವಿಶ್ವನಾಥ್ ಗೆ ಉಲ್ಟಾ ಹೊಡೆದಿದ್ದಾರೆ.
ವಿಶ್ವನಾಥ್ ಸುಮ್ಮನಿರ್ತಾರಾ..?
ಇನ್ನು ಯಡಿಯೂರಪ್ಪ ಹಾಗೂ ತಮ್ಮ ಮುಂಬೈ ಹೋಟೆಲ್ ಸ್ನೇಹಿತರೇ ಈಗ ಉಲ್ಟಾ ಹೊಡೆದಿರೋದ್ರಿಂದ ವಿಶ್ವನಾಥ್ ರೊಚ್ಚಿಗೆದ್ದಿದ್ದಾರೆ.. ವಿಶ್ವನಾಥ್ ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಜೆಡಿಎಸ್ ಸೇರ್ಪಡೆಯಾದ್ರು.. ಕಳೆದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ರೂ ಕುಮಾರಸ್ವಾಮಿ, ದೇವೇಗೌಡರ ಮೇಲಿನ ಸಿಟ್ಟಿಗೆ ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಬರಲು ಕಾರಣಾಗಿದ್ರು.. ಇದೀಗ ಚುನಾವಣೆಯಲ್ಲಿ ಸೋತರೂ ನನ್ನನ್ನ ಮಂತ್ರಿ ಮಾಡಿ ಅಂತ ಯಡಿಯೂರಪ್ಪಗೆ ಒತ್ತಾಯ ಮಾಡ್ತಿದ್ದಾರೆ.. ಮಂತ್ರಿ ಮಾಡದಿದ್ದರೇ ಬೇರೆಯದ್ದೇ ಆಗುತ್ತೆ ಅಂತ ವಿಶ್ವನಾಥ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.. ಎಂಟಿಬಿ ನಾಗರಾಜ್ ಸಹ ಕುಮಾರಸ್ವಾಮಿ ಸಂಪುಟ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಸರ್ಕಾರ ಬರಲು ಕಾರಣರಾಗಿದ್ರು.. ಆದ್ರೆ ಚುನಾವಣೆಯಲ್ಲಿ ಸೋತೆ ಅಂತ ಸಚಿವ ಸ್ಥಾನ ಕೊಡಲ್ಲ ಅಂದ್ರೆ ಹೇಗೆ.. ನೀವು ನಾವು ರಾಜೀನಾಮೆ ಕೊಟ್ಟಾಗ ಕೊಟ್ಟ ಭರವಸೆಯನ್ನ ಈಡೇರಿಸಿ ಅಂತ ಒತ್ತಾಯ ಮಾಡ್ತಿದ್ಧಾರೆ.. ಕುಮಾರಸ್ವಾಮಿ ಸರ್ಕಾರ ಬೀಳಿಸುವ ಬರದಲ್ಲಿ ಯಡಿಯೂರಪ್ಪ ಆಪರೇಷನ್ ಗ್ಯಾಂಗ್ ರೆಬೆಲ್ ಶಾಸಕರಿಗೆ ಸಿಕ್ಕಾಪಟ್ಟೆ ಮಾತು ಕೊಟ್ಟುಬಿಟ್ಟಿದೆ.. ಇನ್ನು ಆಗ ಆಪರೇಷನ್ ಮಾಸ್ಟರ್ ಗಳಾದ ಡಾ. ಅಶ್ವಥ್ ನಾರಾಯಣ್, ಸಿಪಿ ಯೋಗೀಶ್ವರ್, ಬಿಎಸ್ ವೈ ಪಿಎ ಸಂತೋಷ್ ಅನರ್ಹ ಶಾಸಕರ ಕೈಗೆ ಸಿಗದೆ ಓಡಾಡ್ತಿದ್ದಾರೆ.. ಒಟ್ಟಾರೆ ಏಳು ತಿಂಗಳ ಹಿಂದೆ ಯಡಿಯೂರಪ್ಪಗೆ ಬ್ಲೂ ಐ ಬ್ಯಾಯ್ಸ್ ಆಗಿದ್ದ ಅನರ್ಹ ಶಾಸಕರು ಇದೀಗ ಯಡಿಯೂರಪ್ಪಗೆ ಜೇಬಲ್ಲಿ ಕೆಂಡ ಇಟ್ಟುಕೊಂಡಂಗೆ ಆಗಿದೆ.
ನಿಮ್ಮ ಪ್ರಕಾರ ಯಡಿಯೂರಪ್ಪ ಸರ್ಕಾರ ಬರಲು ಕಾರಣರಾದ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಗೆ ಸಚಿವ ಸ್ಥಾನ ಕೊಡಬೇಕಾ..? ಬೇಡ್ವಾ..? ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ