Monday, December 23, 2024

Latest Posts

ಎಂಟಿಬಿ ವರ್ಸಸ್ ಬಚ್ಚೇಗೌಡ : ಹೊಸಕೋಟೆ ರಾಜಕೀಯ ಇತಿಹಾಸ

- Advertisement -

KARNATAKA TV : ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ.. ಬಿ.ಎಸ್ ಯಡಿಯೂರಪ್ಪ ಸರ್ಕಾರ ಳಿಸಿಕೊಳ್ಳಲು ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಒಟ್ಟಾಗಿ ಬಿಜೆಪಿಗೆ ಮುಖಭಂಗ ಮಾಡಿ ಸರ್ಕಾರ ಉರುಳಿಸುವ ಅವಕಾಶ ಇದೆ, ಆ ಸಿದ್ದರಾಮಯ್ಯ ಕುಮಾರಸ್ವಾಮಿ ಒಬ್ಬರನ್ನೊಬ್ಬರು ಬಾಯಿಗೆ ಬಂದಂತೆ ಟೀಕಿಸುತ್ತಾ ಬಿಜೆಪಿಗೆ ಅನುಕೂಲ ಮಾಡಿಕೊಡ್ತಿದ್ದಾರೆ. ಇದೀಗ ಬಿಜೆಪಿಯ ಹಾಲಿ ಹಾಗೂ ಭಾವಿ ನಾಯಕರ ಕಿತ್ತಾಟ ಎಲ್ಲರ ದೃಷ್ಟಿಯನ್ನ ಹೊಸಕೋಟೆಯ ಕಡೆ ತಿರುಗಿಸಿದೆ.

ಹೌದು, ಚುನಾವಣೆ ಘೋಷಣೆಯಾಗ್ತಿದ್ದಂತೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಭಾವಿ ಬಿಜೆಪಿ ನಾಯಕರ ನಡುವೆ ಬೀದಿ ಗಲಾಟೆ ಶುರುವಾಗಿದೆ. ಅನರ್ಹ ಶಾಸಕ ಟಿಬಿ ನಾಗರಾಜ್ ಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಆಗಿದೆ. ಈ ಹಿನ್ನೆಲೆ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ,, ಹೊಸಕೋಟೆ ಮಾಜಿ ಶಾಸಕ ಬಚ್ಚೇಗೌಡ ಕುಟುಂಬ ಟಿಕೆಟ್ ಗಾಗಿ ಬಹಿರಂಗ ಸಮರ ಸಾರಿದೆ. ಟಿಕೆಟ್ ಕೊಡದಿದ್ರೆ ಕತೆ ಬೇರೆನೇ ಇರುತ್ತೆ ಅಂತ ಸಿಎಂ ಯಡಿಯೂರಪ್ಪಗೆ ಬಚ್ಚೇಗೌಡ ಕುಟುಂಬ ಸವಾಲು ಹಾಕಿದೆ.. ಆದ್ರೆ ಎಂಟಿಬಿ ನಾಗರಾಜ್ ಗೆ ಟಿಕೆಟ್ ಫಿಕ್ಸ್ ಆಗಿರೋದು ಬಚ್ಚೇಗೌಡ ಫ್ಯಾಮಿಲಿ ಕೆರಳಿಸಿದೆ..

ಎಂಟಿ.ಬಿ ನಾಗರಾಜ್ ಮೇಲೆ ಬಚ್ಚೇಗೌಡರಿಗೆ ಯಾಕೆ ಕೆಂಡದಂತಾ ಕೋಪ..?

ಚಿಕ್ಕಬಳ್ಳಾಪುರ ಹಾಲಿ ಸಂಸದ ಬಚ್ಚೇಗೌಡ ನಾಡಪ್ರಭು ಕೆಂಪೇಗೌಡ ವಂಶಸ್ಥರು.. ಸಾವಿರಾರು ಎಕರೆ ಜಮೀನು ಹೊಂದಿದ್ದ ಬಚ್ಚೇಗೌಡ ಕುಟುಂಬಸ್ಥರು ಸಾವಿರಾರು ಎಕರೆಯನ್ನ ದಾನ ಮಾಡಿದ್ದಾರೆ.. ಇನ್ನು ಬಚ್ಚೇಗೌಡರ ರಾಜಕೀಯ ಇತಿಹಾಸ ನೋಡೋದಾದ್ರೆ 1978ರಲ್ಲಿ ಬಚ್ಚೇಗೌಡರು ಮೊದಲ ಬಾರಿ ಶಾಸಕರಾಗಿ ಆಯ್ಕೆ ಆದ್ರು ನಂತರ 1983ರಲ್ಲಿ ಸೋಲು ಕಾಣ್ತಾರೆ, ಆದ್ರೆ 1985ರಲ್ಲಿ ಮತ್ತೆ ಗೆಲುವು ಸಾಧಿಸುವ ಬಚ್ಚೇಗೌಡ 1989ರ ಚುನಾವಣೆಯಲ್ಲಿ ಸೋಲುಕಾಣ್ತಾರೆ.. ಮತ್ತೆ 1994 ಚುನಾವಣೆಯ ಚುನಾವಣೆಯಲ್ಲಿ ಮೂರನೆ ಬಾರಿ ಗೆಲುವು ಕಾಣೋ ಬಚ್ಚೇಗೌಡ 1999ರ ಚುನಾವಣೆಯಲ್ಲಿ ನಾಲ್ಕನೇ ಬಾರಿ ಗೆಲುವು ಸಾಧಿಸ್ತಾರೆ..  ನಾಲ್ಕು ಬಾರಿ ಗೆಲುವು ಸಾಧಿಸುವ ಬಚ್ಚೇಗೌಡ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ಮುನೇಗೌಡ ಸೋಲು ಕಾಣ್ತಾರೆ.. ಅಲ್ಲಿ ವರೆಗೂ ಬಚ್ಚೇಗೌಡರನ್ನ ಸೋಲಿಸಲು ಒಕ್ಕಲಿಗಅಭ್ಯರ್ಥಿ ಅಖಾಡಕ್ಕಿಳಿಸುತ್ತಿದ್ದ ಕಾಂಗ್ರೆಸ್ 2004ರ ಚುನಾವಣೆಯಲ್ಲಿ ತಂತ್ರಗಾರಿಕೆ ಬದಲಾಯಿಸುತ್ತೆ.. ಕಾಂಗ್ರೆಸ್ ಪಕ್ಷದಿಂದ ಕುರುಬ ಸಮುದಾಯಕ್ಕೆ ಸೇರಿದ ಎಂಟಿಬಿ ನಾಗರಾಜ್ ಕಣಕ್ಕಿಳಿಸ್ತಾರೆ.. ಈ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ 4 ಬಾರಿ ಶಾಸಕರಾಗಿದ್ದ ಬಚ್ಚೇಗೌಡರನ್ನ900 ಮತಗಳಿಂದ ಸೋಲಿಸ್ತಾರೆ.. ಬಚ್ಚೇಗೌಡರು ಚುನಾವಣೆಯಲ್ಲಿ ಸೋಲಲು ಕಾರಣ ದೇವೇಗೌಡರು ಮಾಡಿದ ತಂತ್ರ.. ಜೆಡಿಎಸ್ ವರಿಷ್ಟ ಹೆಚ್ಡಿ ದೇವೇಗೌಡರ ಬದ್ಧ ವೈರಿಯಾದ ಕಾರಣ ರಾಜಕಾರಣದಲ್ಲಿ ಮೂಲೆಗೆ ಸೇರಿದ್ದ ಬಚ್ಚೇಗೌಡರನ್ನ 2008ರ ಚುನಾವಣೆ ವೇಳೆ ಬಿಜೆಪಿ ಕರೆತಂದ ಯಡಿಯೂರಪ್ಪ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕಾರ್ಮಿಕ ಸಚಿವರನ್ನಾಗಿ ಮಾಡ್ತಾರೆ. ನಂತರ ಮತ್ತೆ 2014 ಚುನಾವಣೆಯಲ್ಲಿ ಬಚ್ಚೇಗೌಡರು ಎಂಟಿಬಿ ನಾಗರಾಝ್ ವಿರುದ್ಧ ಸೋಲು ಕಾಣ್ತಾರೆ. ಎರಡನೇ ಬಾರಿ ಗೆಲುವು ಸಾಧಿಸುವ  ಎಂಟಿಬಿ ನಾಗರಾಜ್ ತಮ್ಮದೇ ಸಮುದಾಯದ ಸಿದ್ದರಾಮಯ್ಯ ಸಿಎಂ ಆದ ಹಿನ್ನೆಲೆ ಬಚ್ಚೇಗೌಡರ ವಿರುದ್ಧ ಪ್ರಬಲವಾಗಿ ಬೆಳಿತಾರೆ.. ನಂತರ 2018ರ ಚುನಾವಣೆಯಲ್ಲಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಚುನಾವಣೆಗೆ ಸ್ಪರ್ಧೇ ಮಾಡಿ ಎಂಟಿಬಿ ನಾಗರಾಜ್ ವಿರುದ್ಧ ಚೊಚ್ಚಲ ಚುನಾವಣೆಯಲ್ಲೇ ಸೋಲು ಕಾಣ್ತಾರೆ.. ತಂದೆ, ಮಗನನ್ನ ಸೋಲುಸಿದ ಎಂಟಿಬಿ ಹೊಸಕೋಟೆಯಲ್ಲಿ ಸೋಲಿಲ್ಲದ ಸರದಾರನಾಗಿದ್ರು. ಇದೀಗ ರಾಜಕಾರಣದ ಕ್ಷಿಪ್ರ ಬೆಳವಣೆಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕುಮಾರಸ್ವಾಮಿಯನ್ನ ಮಾಜಿ ಸಿಎಂ ಮಾಡಿ ಯಡಿಯೂರಪ್ಪರನ್ನ ಸಿಎಂ ಮಾಡಿ ಅನರ್ಹ ಶಾಸಕರಾಗಿದ್ದಾರೆ.. ತಾನು ಸಿಎಂ ಆಗಲು ಎಂಟಿಬಿ ಕಾರಣರಾದ ಹಿನ್ನೆಲೆ ಇದೀದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.. ಆದ್ರೆ, ಶರತ್ ಬಚ್ಚೇಗೌಡ ನಮಗೆ ಟಿಕೆಟ್ ಕೊಡದಿದ್ರೆ ಬಿಜೆಪಿ ತಕ್ಕ ಪಾಠ ಕಲಿಸ್ತೀವಿ ಅಂತ ಅಬ್ಬರಿಸಿದ್ದಾರೆ.. ಆದ್ರೆ ಯಡಿಯೂರಪ್ಪ ನಿಮ್ಮ ತಂದೆ ಬಚ್ಚೇಗೌಡ ಚಿಕ್ಕಬಳ್ಳಾಪುರ ಸಂಸದರಾಗಿದ್ದಾರೆ.. ಮೂಮದಿನ ಚುನಾವಣೆಯಲ್ಲಿ ನಿಮಗೆ ಎಂಪಿ ಟಿಕೆಟ್ ಗ್ಯಾರಂಟಿ.. ಆದ್ರೆ, ಈಗ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಗೆಲ್ಲಿಸಿ ಅಂತ ಕೋರಿ ಕಳ್ತಿದ್ದಾರೆ.. ಆದ್ರೆ ಶರತ್ ಬಚ್ಚೇಗೌಡ ಟೀಮ ಮಾತ್ರ ಸುತಾರಂ ಒಪ್ಪುತ್ತಿಲ್ಲ.

ನಿಮ್ಮ ಪ್ರಕಾರ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಗೆಲ್ತಾರಾ..? ಸೋಲ್ತಾರಾ..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss