ಧಾರವಾಡ ಕಾಮಿಡಿ ಯುಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಬಂದೇನವಾಜ ಶಿರಹಟ್ಟಿ, ಹಿಂದೂ ಯುವತಿ ಗಾಯತ್ರಿ ಜಾಲಿಹಾಳ ಮದುವೆ ಆಗಿರುವ ವಿವಾದ ಸುದ್ದಿಯಾಗಿತ್ತು. ಇದನ್ನು ಲವ್ ಜಿಹಾದ್ ಎಂದು ಆರೋಪಗಳು ಕೂಡ ಕೇಳಿಬಂದಿತು.
ಗಾಯತ್ರಿ ಜಾಲಿಹಾಳ ಪೋಷಕರು ನಮ್ಮ ಮಗಳನ್ನು ನಮಗೆ ಕೊಡಿಸಿ, ಮುಕಳೆಪ್ಪ ಮೋಸ ಮಾಡಿದ್ದಾನೆ ಎಂದು ವಿಡಿಯೋ ಕೂಡ ಮಾಡಿದ್ದರು. ಇದೀಗ ಈ ಕುರಿತಾಗಿ ಯುವತಿಯೇ ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ಮೈಂಡ್ ವಾಶಗೆ ಒಳಗಾಗಿಲ್ಲ ಮುಕಳೆಪ್ಪನನ್ನು ಇಷ್ಟಪಟ್ಟೇ ಮದುವೆಯಾಗಿದ್ದೇನೆ ಎಂದು ಗಾಯಾತ್ರಿ ಜಾಲಿಹಾಳ ಹೇಳಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಯಾವುದೇ ಮೈಂಡ್ ವಾಶಗೆ ಒಳಗಾಗಿಲ್ಲ. ನಮ್ಮ ಮದುವೆ ನಂತರ ನಮ್ಮ ತಾಯಿಯೇ ನಮಗೆ ಸಪೋರ್ಟ್ ಮಾಡಿದ್ದಾರೆ. ಅದರ ಕುರಿತಾದ ಸಾಕ್ಷಿಗಳನ್ನು ಸದ್ಯದಲ್ಲೇ ಅಪ್ಲೋಡ್ ಮಾಡುತ್ತೇನೆ. ಮುಕಳೆಪ್ಪ ನಾನು ಪ್ರೀತಿಸಿ ಮದುವೆ ಆಗಿದ್ದೇವೆ. ಸ್ವಇಚ್ಚೆಯಿಂದಲೇ ನಾನು ಮಕಳೆಪ್ಪನ ಮದುವೆ ಮಾಡಿಕೊಡಿದ್ದೇವೆ. ಆದರೆ ಈಗ ಯಾರ್ ನಮ್ಮ ತಾಯಿಯ ಮೈಂಡ್ ವಾಶ್ ಮಾಡಿದ್ದಾರೆ ಗೊತ್ತಿಲ್ಲ. ಹೊರಗಿನವರ ಮೈಂಡ್ ವಾಶದಿಂದ ನಮ್ಮ ತಾಯಿ ಶಿವ್ವಕ್ಕ ಮಾಧ್ಯಮ ಮುಂದೆ ಬರುತ್ತಿದ್ದಾರೆ. ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ಯಜಮಾನ್ರಿಗೆ ಹಾಗೂ ಕುಟುಂಬಕ್ಕೆ ಏನಾದರೂ ಆದರೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ