ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಫೇಸ್ ಬುಕ್ ಲೈವ್ ನಲ್ಲಿ ಸಾಕಷ್ಟು ವಿಷ್ಯಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದ್ರಲ್ಲೂ ದಚ್ಚು ಉದ್ಯಮಿ ಅಂಬಾನಿ ವಿರುದ್ಧ ಗುಡುಗಿದ್ದಾರೆ. ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯದೆ ಇರುವುದರ ಹಿಂದೆ ಅಂಬಾನಿ ಕೈವಾಡವಿದೆ ಎಂದಿದ್ದಾರೆ.
ಈಗಾಗ್ಲೇ ಮಾರುಕಟ್ಟೆ, ಮದುವೆಗಳಲ್ಲಿ ಜನರಿದ್ದಾರೆ. ಸೂಲ್ಕು-ಕಾಲೇಜುಗಳು ಸಹ ಆರಂಭವಾಗಿವೆ. ಆದ್ರೆ ಥಿಯೇಟರ್ ತೆರೆಯುತ್ತಿಲ್ಲ. ನಮಗೆ ನೀವು ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ರೆ ತೃಪ್ತಿ. ಈಗ ಎಲ್ಲಾ ಓಪನ್ ಮಾಡಿದ್ರು ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರೋ ದರ್ಶನ್, ಇದಕ್ಕೆ 5ಜಿ ಕಾರಣ ಎನಿಸುತ್ತದೆ ಎಂದಿದ್ದಾರೆ.

ಅಂಬಾನಿ 5ಜಿ ಆರಂಭ ಮಾಡುತ್ತಿದ್ದಾರೆ. ಇದು ದೊಡ್ಡ ಸ್ಕ್ಯಾಮ್ ಎಂದು ನನಗೆ ಅನಿಸುತ್ತಿದೆ. 5ಜಿ ಓಡಾಡಬೇಕು ಎಂದ್ರೆ ಒಟಿಟಿ ಹಾಗೂ ಆನ್ ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು ಸಿಗುತ್ತದೆ. ಅದೇ ಥಿಯೇಟರ್ ತೆರೆದುಬಿಟ್ರೆ ಒಟಿಟಿ ಮಾರ್ಕೆಟ್ ಕುಸಿಯುತ್ತದೆ. ಹೀಗಾಗಿ ಅಂಬಾನಿ ಕೆಲವು ದೊಡ್ಡ-ದೊಡ್ಡವರಿಗೆ ಹೇಳಿ ಚಿತ್ರಮಂದಿರ ಅವಕಾಶ ನಿರಾಕರಿಸಿರಬಹುದು ಎಂದು ಹೇಳಿದ್ದಾರೆ.