BREAKING: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ

ನವದೆಹಲಿ: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ ನೀಡಿದ್ದಾರೆ. ನೂತನ ನಿರ್ದೇಶಕರಾಗಿ ಪುತ್ರ ಆಕಾಶ್ ಅಧಿಕಾರ ಸ್ವೀಕಾರಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ನ ಡಿಜಿಟಲ್ ಅಂಗವಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಮುಕೇಶ್ ಅಂಬಾನಿ ಈ ಘಟಕದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದೆ.

ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಮುಕೇಶ್ ಅವರ ಪುತ್ರ ಆಕಾಶ್ ಅಂಬಾನಿ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

About The Author