Sunday, September 8, 2024

Latest Posts

Mukesh Ambani : ಅಂಬಾನಿ ಮನೆಯ ತಿಂಗಳ ವಿದ್ಯುತ್ ಬಿಲ್‌ ಎಷ್ಟು ಗೊತ್ತಾ? : ಕೇಳಿದ್ರೆ ಶಾಕ್ ಆಗ್ತೀರಾ!

- Advertisement -

ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಸಿರಿತನದ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ ಅನಿಸುತ್ತೆ. ಯಾಕೆಂದರೆ ಅವರು ಎಷ್ಟು ಶ್ರೀಮಂತ ಹಾಗೂ ಅವರ ಜೀವನ ಶೈಲಿ ಎಷ್ಟು ದುಬಾರಿ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಮುಖೇಶ್ ಅಂಬಾನಿ ಪೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿ 2023ರಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಭಾರತದಲ್ಲೇ ಅತ್ಯಂತ ದುಬಾರಿ ಆಸ್ತಿ ಎನಿಸಿಕೊಂಡಿರುವ ಆ್ಯಂಟಿಲಿಯಾ ಮನೆ ಅಂಬಾನಿಯ ಸಿರಿವಂತನ ಜೀವನ ಶೈಲಿಗೆ ಹಿಡಿದ ಇನ್ನೊಂದು ಕೈಗನ್ನಡಿ. 27 ಅಂತಸ್ತಿನ ಐಷಾರಾಮಿ ಮನೆ ಆ್ಯಂಟಿಲಿಯಾದ ಸಾಮಾನ್ಯ ತಿಂಗಳೊಂದರ ವಿದ್ಯುತ್ ಬಿಲ್ ಕೇಳಿದರೇ ನಿಜವಾಗಲು ನೀವು ದಂಗಾಗ್ತೀರಾ.

 

ಮುಕೇಶ್ ಅಂಬಾನಿ ಮುಂಬೈನಲ್ಲಿರುವ ತಮ್ಮ ಐಷಾರಾಮಿ ಮನೆ ಆಂಟಿಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. 4,00,000 ಚದರ ಅಡಿ ಪ್ರದೇಶದಲ್ಲಿ 2006ರಲ್ಲಿ ನಿರ್ಮಾಣವಾದ ಈ ಮನೆಯ ಕಾಮಗಾರಿ 2010ರಲ್ಲಿ ಪೂರ್ಣಗೊಂಡಿತು. ಅಂದಾಜು 15,000ಕೋಟಿ ರೂ.ಗಳ , 27 ಅಂತಸ್ತಿನ ಆ್ಯಂಟಿಲಿಯಾ ಹೆಸರಿನ ಈ ಅರಮನೆ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಹಾಗಾದರೆ ಈ ಭವ್ಯ ಅರಮನೆಯ ತಿಂಗಳೊಂದರ ವಿದ್ಯುತ್ ಬಿಲ್ ಎಷ್ಟಿರಬಹುದು ಎಂದು ನೀವು ಒಮ್ಮೆಯಾದರೂ ಯೋಚಿಸಿದ್ದೀರಾ? ಈ ಮನೆಯ ತಿಂಗಳ ಬಿಲ್ ಎಷ್ಟು ಎಂದು ನೋಡಿದರೆ, ಒಂದು ಕ್ಷಣ ಅಚ್ಚರಿಗೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. ಅವರ ಮನೆಯ ತಿಂಗಳ ವಿದ್ಯುತ್ ಬಿಲ್ ನಲ್ಲೇ ನಾವು ದೊಡ್ಡ ಮನೆಯನ್ನೇ ಕಟ್ಟಿಸಬಹುದು. ಹೌದು, 2010ರಲ್ಲಿ ಆ್ಯಂಟಿಲಿಯಾದ ಮೊದಲ ತಿಂಗಳ ವಾಸದ ವಿದ್ಯುತ್ ಬಿಲ್ಲೇ ಬರೋಬ್ಬರಿ 70 ಲಕ್ಷ ರೂಪಾಯಿಗಳು. ಆ ನಂತರದಲ್ಲೂ ಹೆಚ್ಚೂ ಕಡಿಮೆ 70 ಲಕ್ಷದಿಂದ 1 ಕೋಟಿವರೆಗೆ 1 ತಿಂಗಳ ವಿದ್ಯುತ್ ಬಿಲ್ ಬರುತ್ತದೆ.

 

ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಐಷಾರಾಮಿ ಆ್ಯಂಟಿಲಿಯಾ ತಿಂಗಳಿಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ಈ ಮನೆಯ ಒಳಾಂಗಣಗಳಷ್ಟೇ ಅಲ್ಲ, ಆರು ಮಹಡಿಗಳಲ್ಲಿ ಹರಡಿರುವ ಕಾರ್ ಪಾರ್ಕಿಂಗ್ ಸ್ಥಳವೂ ಹವಾನಿಯಂತ್ರಿತವಾಗಿದೆ. ಇನ್ನು, ಜಗತ್ತಿನ ಎಲ್ಲಾ ಐಶಾರಾಮಿ ವಿದ್ಯುತ್ ಉಪಕರಣಗಳೂ ಇಲ್ಲಿರುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಅದರೊಂದಿಗೆ, ಮನೆಯಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹಬ್ಬ, ಮದುವೆ, ಮತ್ತಿತರೆ ವಿಶೇಷ ಸಂದರ್ಭಗಳಲ್ಲಿ ಆ್ಯಂಟಿಲಿಯಾ ಹೊರಭಾಗವನ್ನೂ ಪೂರ್ತಿ ಝಗಮಗಿಸುವಂತೆ ಮಾಡಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಆ್ಯಂಟಿಲಿಯಾ ವಿದ್ಯುತ್ ಬಿಲ್ ಕೋಟಿ ಕೋಟಿ ಹತ್ತಿರದಲ್ಲೇ ಪ್ರತಿ ತಿಂಗಳೂ ಬರುತ್ತದೆ. ಅಂಥದರಲ್ಲಿ ಇದೀಗ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿರುವ ಕಾರಣ ತಿಂಗಳಿಡೀ ಆ್ಯಂಟಿಲಿಯಾ ಕಟ್ಟಡ ಝಗಮಗಿಸುತ್ತಲೇ ಇರುವ ಕಾರಣ ತಿಂಗಳ ವಿದ್ಯುತ್ ಬಿಲ್ ಅದೆಷ್ಟು ಕೋಟಿ ಮುಟ್ಟುತ್ತೊ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡದೇ ಇರದು.

 

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಅಂಬಾನಿಗೆ ಮನೆಯ ತಿಂಗಳೊಂದರ ಕರೆಂಟ್ ಬಿಲ್ 1-2 ಕೋಟಿ ಬಂದರೆ ಅಂಥಾ ದೊಡ್ಡ ಮೊತ್ತವೇನು ಅನಿಸುವುದಿಲ್ಲ ಆದರೆ ಈ ಬಂಗಲೆಯ ವಿದ್ಯುತ್ ಬಿಲ್ ವಿಚಾರ ಜನಸಾಮಾನ್ಯರಿಗೆ ದೊಡ್ಡ ಅಚ್ಚರಿಯ ವಿಚಾರವಾಗಿದೆ.

- Advertisement -

Latest Posts

Don't Miss