ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಮಾಡುವ ಮುಖೇಶ್ ಅಂಬಾನಿ ಕುಟುಂಬ ಪಿತೃ ಪಕ್ಷದಲ್ಲಿಯೂ ತನ್ನ ಕರ್ತವ್ಯವನ್ನು ಪಾಲಿಸಿಕೊಂಡು ಬರ್ತಿದೆ. ಬಿಹಾರದ ಗಯಾದಲ್ಲಿರುವ ಪ್ರಸಿದ್ಧ ವಿಷ್ಣುಪಾದ ದೇವಸ್ಥಾನಕ್ಕೆ ಅಂಬಾನಿ ಕುಟುಂಬ ಪಿಂಡದಾನ ಮಾಡಿದೆ.
ಪಿಂಡ ದಾನ ಸಮಾರಂಭದ ನಂತ್ರ ಪುರೋಹಿತರು ಮತ್ತು ಬ್ರಾಹ್ಮಣರಿಗೆ ದೇಣಿಗೆ ನೀಡುವುದನ್ನು ಕಡ್ಡಾಯ. ಮುಖೇಶ್ ಅಂಬಾನಿ ಅತ್ಯಂತ ಗೌರವದಿಂದ ಪುರೋಹಿತರಿಗೆ ದೇಣಿಗೆ ನೀಡಿದ್ದಾರೆ. ಹಾಜರಿದ್ದ ಪುರೋಹಿತರಿಗೆ ಗೌರವವಾಗಿ ಲಕೋಟೆಗಳಲ್ಲಿ ನಗದು ನೀಡಿದ್ದಾರೆ. ಮುಖೇಶ್ ಅಂಬಾನಿ ಮೂರು ಚಿನ್ನದ ಉಂಗುರ ಮತ್ತು ಕೆಲವು ಪಾತ್ರೆಗಳನ್ನು ಸಹ ದಾನ ಮಾಡಿದ್ದಾರೆ.
ಪ್ರಾಥಮಿಕವಾಗಿ ಬಾರ್ಲಿ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ಮಾಡಿದ ಪಿಂಡವನ್ನು ದಾನ ಮಾಡಲಾಗುತ್ತದೆ. ಈ ಉಂಡೆಗಳನ್ನು ದೇವರುಗಳು ಮತ್ತು ಪೂರ್ವಜರಿಗೆ ಅರ್ಪಿಸಲಾಗುತ್ತದೆ. ಪೂಜೆಗೆ ಎಳ್ಳು, ಬಾರ್ಲಿ, ಕುಶಾ ಹುಲ್ಲು, ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು ಮತ್ತು ಗಂಗಾ ನೀರು ಇತರ ವಸ್ತುಗಳನ್ನು ಬಳಸಲಾಗಿದೆ.

