JDS : ದಲಿತ ಸಮಾಜದ ಶಾಸಕರನ್ನ ಕಾಂಗ್ರೆಸ್ ಗೆ  ಸೆಳೆಯಲು ಪ್ಲಾನ್.

ಕೋಲಾರ:  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಲು  ಆಪರೇಷನ್ ಹಸ್ತದ ಮೂಲಕ ಬೇರೆ ಪಕ್ಷದ ನಾಯಕರನ್ನು ತನ್ನತ್ತ ಸೆಳೆಯಲು ತೊಡೆ ತಟ್ಟಿ ನಿಂತಂತೆ ಕಾಣಿತ್ತಿದೆ. ಅದಕ್ಕಾಗಿ ಶತ ಪ್ರಯತ್ನ ಪಡುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಈ ನಡೆಗೆ ಮುಳಬಾಗಿಲು ಜೆಡಿಎಸ್ ಶಾಸಕ ಸಮೃಧ್ದಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಆಪರೇಷನ್ ಕಾಂಗ್ರೆಸ್ ಮೂಲಕ ಜೆಡಿಎಸ್ ಶಾಸಕರನ್ನ ಸೆಳೆಯುವ ಯತ್ನ ನಡೆದಿದೆ. ದೆಹಲಿಗೆ ಬರುವಂತೆ ಒತ್ತಡ ಹಾಕಿದ್ರು, ನಾನು ಹೋಗಿಲ್ಲ. ಬಂಗಾರಪೇಟೆ ಕೈ ಶಾಸಕ ನಾರಾಯಣಸ್ವಾಮಿ ಮೂಲಕ ಪಕ್ಷ ಸೇರ್ಪಡೆ ಯತ್ನ. ನಾನೆಂದು ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ, ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದ 19 ಶಾಸಕರು 2-3 ದಿನ ಪ್ರವಾಸಕ್ಕೆ ಹೋಗಲಿದ್ದೇವೆ.

ಜೆಡಿಎಸ್ ಬಿಟ್ಟು ಯಾರು ಹೋಗಲ್ಲ, ನಮ್ಮಲ್ಲಿನ ಒಗಟ್ಟು ಪ್ರದರ್ಶನ ಮಾಡಲಿದ್ದೇವೆ.ಕಾಂಗ್ರೆಸ್ ಆಪರೇಷನ್ ವರ್ಕೌಟ್ ಆಗಲ್ಲ, ರಿವರ್ಸ್ ಆಪರೇಷನ್ ನಡೀತಿದೆ, ಅದು ಕೆಲವೇ ದಿನಗಳಲ್ಲಿ ತಿಳಿಯಲಿದೆ.ಕಾದು ನೋಡಿ, ಎಲ್ಲರಿಗೂ ಗೊತ್ತಾಗುತ್ತೆ ಈ ಸರ್ಕಾರ ಇರೋದು ಡೌಟ್.ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಇಲ್ಲ, ವರ್ಗಾವಣೆ ದಂಧೆ ಹಿಂದೆ ಬಿದ್ದಿದೆ. ಕೋಲಾರದಲ್ಲಿ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್  ಹೇಳಿದ್ದಾರೆ.

DK Shivakumar: ಗೃಹ ಲಕ್ಷ್ಮೀ ಯೋಜನೆ ಕಾರ್ಯಕ್ರಮ ಪೂರ್ವಭಾವಿ ಸಭೆ..!

 

Laxmi hebbalkar: ಗೃಹಲಕ್ಷ್ಮಿ ಯೋಜನೆ ಯಶಸ್ಸಿಗೆ ಟೊಂಕಕಟ್ಟಿ‌ ನಿಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

BVB College: ಸೀಟ್ ನೀಡಬೇಕೆಂದು ಅಗ್ರಹಿಸಿ ಭಗತ್ ಸಿಂಗ್ ಸೇವಾ ಸಮಿತಿಯಿಂದ ಪ್ರತಿಭಟನೆ..!

About The Author