Friday, March 14, 2025

Latest Posts

26/11 ಮುಂಬೈ ದಾಳಿ ನೆನೆದು ಸಚಿವ ಎಸ್. ಜೈಶಂಕರ್ ಟ್ವೀಟ್

- Advertisement -

ದೆಹಲಿ:  26/11 ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರನ್ನು ಭಾರತ ಸ್ಮರಿಸುತ್ತಿದ್ದಂತೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ‘ಈ ದಾಳಿಯನ್ನು ಯೋಜಿಸಿದ ಮತ್ತು ಪ್ಲ್ಯಾನ್ ಮಾಡಿದವರನ್ನು ನ್ಯಾಯದ ಮುಂದೆ ತರಬೇಕು’ ಎಂದು ಟ್ವೀಟ್ ಮಾಡಿದ್ದಾರೆ. 166 ಜನರ ಸಾವಿಗೆ ಕಾರಣವಾದ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಮಾರಣಾಂತಿಕ ದಾಳಿಯ ಚಿತ್ರಗಳನ್ನು ಒಳಗೊಂಡಿರುವ ಕಿರು ವೀಡಿಯೊವನ್ನು ಸಚಿವರು ಹಂಚಿಕೊಂಡಿದ್ದಾರೆ.

ಇಂಡೋನೇಷ್ಯಾದಲ್ಲಿ ಭೂಕಂಪ : ಸಾವಿನ ಸಂಖ್ಯೆ 310ಕ್ಕೆ ಏರಿಕೆ, 24 ಜನ ನಾಪತ್ತೆ

ಅಂತರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ ಅವರ ಆಘಾತವನ್ನು ನೆನಪಿಟ್ಟುಕೊಳ್ಳುವುದು ಮತ್ತು ಭಯೋತ್ಪಾದನೆಯ ಅಪರಾಧಿಗಳನ್ನು ನ್ಯಾಯಕ್ಕೆ ತರಲು ನಮ್ಮ ಪ್ರಯತ್ನಗಳಲ್ಲಿ ಪರಿಶ್ರಮ ಪಡುವುದು ನಮ್ಮ ಜವಬ್ದಾರಿಯಾಗಿದೆ ಎಂದು ಜೈಶಂಕರ್ ಹೇಳಿದರು. 1 ನಿಮಿಷ-36 ಸೆಕೆಂಡ್ ಅವಧಿಯ ವೀಡಿಯೊ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ – ‘ಒಂದು ದಾಳಿ ನಡೆದರೂ ಅದು ದೊಡ್ಡದು ಎಂದು ಪರಿಗಣಿಸುತ್ತೇವೆ. ಒಂದೇ ಒಂದು ಜೀವ ಕಳೆದುಕೊಂಡರೂ ಸಹ ಅದು ದೊಡ್ಡದು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವತನಕ ನಾವು ಅಲ್ಲಿಯವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಮೋದಿ ವಿಡಿಯೋದಲ್ಲಿ ಹೇಳಿದ್ದಾರೆ

ಇಂದು ಸುಪ್ರೀಂಕೋರ್ಟ್ ನಲ್ಲಿ ಆಯೋಜಿಸಲಾದ ಸಂವಿಧಾನ ದಿನಾಚರಣೆಯಲ್ಲಿ ಮೋದಿ ಭಾಗಿ : ವಿವಿಧ ಯೋಜನೆಗಳೆಗೆ ಚಾಲನೆ

- Advertisement -

Latest Posts

Don't Miss