state news
ಬೆಂಗಳೂರು(ಫೆ.20): ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಜಗಳ ಜಟಾಪಟಿಗಳು ತುಸು ಹೆಚ್ಚಾಗಿವೆ. ಸದ್ಯಕ್ಕೆ ಸುದ್ದಿಯಲ್ಲಿರೋ ಬಿಸಿ ಬಿಸಿ ಸುದ್ದಿ ಅಂದ್ರೆ ರೂಪಾ ಹಾಗೂ ರೋಹಿಣಿ ಸಿಂಧೂರಿ ಇಬ್ಬರ ಜಗಳ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಟೀಕಿಸಿಕೊಳ್ಳುತ್ತಿರುವ ವಿಚಾರ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇದೆ.
ರೂಪ ಹೇಳಿಕೆಗೆ ತಿರುಗೇಟು ನೀಡಿದ, ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ, ಅಷ್ಟಕ್ಕೂ ರೂಪಾ ಯಾರು? ಅಂತ ಕೋಪದಿಂದ ಉತ್ತರ ಕೊಟ್ಟಿದ್ದಾರೆ. ರೂಪ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇದರಿಂದ ಗೆಟ್ ವೆಲ್ ಸೂನ್ ಅಂತ ಹೇಳಿ, ರೂಪ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು. ಈ ಕುರಿತಾಗಿ, ನಗರದ ಟಿ ದಾಸರಹಳ್ಳಿಯಲ್ಲಿರುವ ತಮ್ಮ ನಿವಾಸದ ಮುಂದೆ ಮಾತಾಡಿದರು. ಪದೇ ಪದೇ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ಇದೀಗ ಇವರಿಬ್ಬರ ಜಗಳಕ್ಕೆ ಸಚಿವ ಮುನಿರತ್ನ ಕಿಡಿಕಾರಿದ್ದಾರೆ. ಈ ಕುರಿತು ಸರ್ಕಾರದಿಂದ ಕ್ರಮ ಆಗುತ್ತೆ. ಇವರಿಬ್ಬರ ಮೇಲೆ ಶಾಸಕರು ಕಿಡಿಕಾಡುತ್ತಿದ್ದಾರೆ.