ಕೋಲಾರ: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ದಾಖಲು ವಿಚಾರ, ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಬಿಜೆಪಿ ವಿರುದ್ದ ದ್ವೇಶದ ರಾಜಕಾರಣ ಮಾಡಲು ಮುಂದಾಗಿದ್ದಾರೆ, ದೇಶ ಭಕ್ತರು, ಹಿಂದು ಪರ ಸಂಘಟನೆ ಕಾರ್ಯಕರ್ತರ ಮೇಲೆ ಕೇಸುಗಳನ್ನ ಹಾಕಿ ಭಯ ಪಡಿಸುವ ಕೆಲಸ ಮಾಡ್ತಿದ್ದಾರೆ. ಪೋಲೀಸ್ ಇಲಾಖೆಗೆ ಸಿದ್ದರಾಮಯ್ಯ ಅವರು ಟಾರ್ಗೆಟ್ ಕೊಟ್ಟಿದ್ದಾರೆ ಅನಿಸುತ್ತೆ.
ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಗಿತ್ತು, ರಾಜ್ಯದಲ್ಲಿ ಒಂದು ಕೋಮಿನವರು ಲಾಂಗ್ ಹಿಡಿದು ಕೇಕ್ ಕಟ್ ಮಾಡಿದ್ದಾರೆ, ಇವರೆಲ್ಲ ಕಾಂಗ್ರೇಸ್ ಪಕ್ಷ ನಮಗೆ ಸ್ವಂತ ಎಂದು ತಿಳಿದುಕೊಂಡಿದ್ದಾರೆ, ಆಲಿ ಬಾಬ ನಲಪೈ ದೊಂಗಲು ಇವರೆಲ್ಲಾ ಏನೇ ಕುತಂತ್ರ ಕುಚೇಷ್ಟೆ ಮಾಡಿದ್ರು, ಆಡಳಿತ ಪಕ್ಷಕ್ಕೆ ಸಂವಿಧಾನದಲ್ಲಿ ಎಷ್ಟು ಅಧಿಕಾರ ಇದ್ಯೋ ಅಷ್ಟೇ ಅಧಿಕಾರಿ ವಿರೋದ ಪಕ್ಷಕ್ಕೂ ಇದೆ, ಅಡಳಿತ ಪಕ್ಷದ ತಪ್ಪುಗಳನ್ನು ಖಂಡಿಸುವ ಆಧಿಕಾರ ಸಂವಿಧಾನದಲ್ಲಿ ವಿರೋದ ಪಕ್ಷಕ್ಕಿದೆ, ನಮಗೆ ಇರುವ ಅಧಿಕಾರವನ್ನು ಯಾರೆ ಕಸಿದುಕೊಳ್ಳಲು ಮುಂದಾದ್ರೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರವನ್ನ ಕೊಡುತ್ತಾರೆ.
ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಘಟನೆ
ಡಿ.ಜೆಹಳ್ಳಿ ಕೆಜೆ ಹಳ್ಳಿಯಲ್ಲಿ ಮಡೆದಿದ್ದ ಗಲಭೆ ಪೋಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಪ್ರಕರಣ, ತನ್ವೀರ್ ಸೇಟ್ ಮೇಲೆ ಹಲ್ಲೆ ಮಾಡಿದ ವಿಚಾರ ಇದನ್ನೆಲ್ಲಾ ಸಣ್ಣ ಘಟನೆ ಬಿಡಿ ಅಂತ ಆಡಳಿತ ಪಕ್ಷದವರು ಹೇಳ್ತಾರೆ, ರಾಜ್ಯದಲ್ಲಿ ಇತ್ತೀಚೆಗೆ ಆತಂಕವಾದಿಗಳ ಬಂದನವಾಗಿದೆ, ಅವರಿಗೆ ಜೈಲಿನಲ್ಲಿ ವಿಐಪಿ ಟ್ರೀಟ್ ಮೆಂಟ್ ಕೊಡ್ತಿದ್ದಾರೆ ಕಾಂಗ್ರೇಸ್ ಪಕ್ಷ ದೇಶ ವಿರೋದಿ ಚಟುವಟಿಕೆಗೆ ಹಾಗೂ ಹಿಂದೂ ಹೆಣ್ಣು ಮಕ್ಕಳ ಟಾಯ್ಲೆಟ್ ನಲ್ಲಿ ವಿಡಿಯೋ ಮಾಡುವವರ ಪರ ನಿಂತಿದೆ ನಿಜಕ್ಕೂ ನಾಚಿಗೆ ಹಾಗಬೇಕು ಎಂದು ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸಿದ ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ಹಿಂದೂ ಹೆಣ್ಣು ಮಕ್ಕಳಿರಬಹುದು ಮುಸ್ಲಿಂ ಹೆಣ್ಣು ಮಕ್ಕಳಿರಬಹುದು ಅವರ ರಕ್ಷಣೆ ಮಾನ ಪ್ರಾಣ ಕಾಪಾಡೋದು ನಮ್ಮ ಕೆಲಸ, ದಶದಲ್ಲೇ ಎಲ್ಲೇ ಅನ್ಯಾಯ ಆದ್ರೂ ಅದನ್ನ ಎದುರಿಸುವ, ಹೋರಾಟ ಮಾಡುವ ಹಕ್ಕು ನಮ್ಮದು ಅದಕ್ಕೆ ಎಷ್ಟೇ ಕೇಸುಗಳನ್ನು ಹಾಕಿದ್ರು ಡೋಂಟ್ ಕೇರ್. ದೇಶಕ್ಕಾಗಿ ಎಷ್ಟೋ ಜನರ ಪ್ರಾಣ ತ್ಯಾಗ ಕೊಟ್ಟಿರೋದು ಬಿಜೆಪಿ ಪಕ್ಷ ದೇಶಕ್ಕೆ ಧರ್ಮಕ್ಕೆ ದಕ್ಕೆ ತರುವಂತ ಕೆಲಸಗಳು ನಡೆದಾಗ ನಮ್ಮ ಹೋರಾಟ ನಿರಂತರವಾಗಿರುತ್ತೆ ಕೋಲಾರದ ಸುಗಟೂರಿನ ಗ್ರಾ.ಪಂ ಕಟ್ಟಡ ಉದ್ಘಾಟನೆ ಬಳಿಕ ಸಂಸದ ಎಸ್ ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.
S muniswamy: ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ
DK Shivakumar : ವಿದೇಶದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸಲಾಗುತ್ತಿದೆ: ಡಿಕೆಶಿ