Saturday, July 5, 2025

Latest Posts

ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿ..! ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ..!

- Advertisement -

Political News:

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಈ ದಿನ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪನವರ ಬೆಂಗಳೂರಿನ ಮನೆಗೆ ಭೇಟಿ ಮಾಡಿ ಈ ದಿನ ಕೋಲಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸದೆ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು  ಸಿದ್ದರಾಮಯ್ಯನವರು ಮನವರಿಕೆ ಮಾಡಿದರು.ನಮ್ಮಿಬ್ಬರ ಮಧ್ಯೆ ಏನೇ ಗೊಂದಲಗಳಿದ್ದರೂ ಮಾತುಕತೆಯ ಮೂಲಕ  ಸರಿಪಡಿಸಿಕೊಳ್ಳೋಣ . ಈಗ ಸಭೆಗೆ ಬನ್ನಿ ಎಂದು ಅತ್ಯಂತ ಆತ್ಮೀಯವಾಗಿ ಸಿದ್ದರಾಮಯ್ಯನವರು ಮನವಿ ಮಾಡಿದರು. ಅವರ ಆಹ್ವಾನವನ್ನು ಸ್ವೀಕರಿಸಿದ ಕೆ.ಹೆಚ್.ಮುನಿಯಪ್ಪರವರು   ಕೆಲವು ಷರತ್ತುಗಳನ್ನು ಹಾಕಿದ ಸಭೆಗೆ ಬರಲು ಒಪ್ಪಿದರು.

ಎ ಐ ಸಿ ಸಿ ಹಾಗೂ ಕೆಪಿಸಿಸಿಯವರನ್ನು ಒಳಗೊಂಡು  ಸಭೆ .ಕೋಲಾರ ಕಾಂಗ್ರೆಸ್ ನಲ್ಲಿ ಇರುವಂತಹ ಸಮಸ್ಯೆಗಳ ಪರಿಹಾರವನ್ನು ಆದಷ್ಟು ಬೇಗ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿದರು.

ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದವರು ಮಾತ್ರ ಪಕ್ಷದ ಜವಾಬ್ದಾರಿಯನ್ನ ಹೊರಬೇಕು, ಮಿಕ್ಕವರು ಅವರವರ ಕ್ಷೇತ್ರಗಳ ಜವಾಬ್ದಾರಿಗಳನ್ನ ನೋಡಿಕೊಳ್ಳಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ ಕೆ.ಹೆಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸಲು ಒಪ್ಪಿದರು.

ಮಾತುಕತೆ ಫಲಪ್ರದವಾದ ಕೋಡಲೆ ಕೆ.ಹೆಚ್.ಮುನಿಯಪ್ಪರನ್ನು ಸಿದ್ದರಾಮಯ್ಯರವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕೋಲಾರಕ್ಕೆ ಕರೆತರುತ್ತಿದ್ದಾರೆ. ಆ ಮೂಲಕ ಕೆ.ಹೆಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸುವರೆ ಇಲ್ಲವೆ ಎಂಬ ಅನುಮಾನಕ್ಕೆ ಅವರ ಆಗಮನದಿಂದ ಶಮನಗೊಂಡಂತಾಗಿದೆ.

ಮಾತುಕತೆ ವೇಳೆ ಕಾಂಗ್ರೇಸ್ ಪಕ್ಷದ ಕೋಲಾರ ಜಿಲ್ಲಾ ಉಸ್ತುವಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ, ಕೆ.ಹೆಚ್ ಮುನಿಯಪ್ಪ ಬಣದ ಹಿರಿಯ ಮುಖಂಡರಾದ ದಳಸನೂರು ಗೋಪಾಲಕೃಷ್ಣ, ಶೇಷಾಪುರ ಗೋಪಾಲ್, ಕೋಲಾರ ನಗರ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಅದ್ಯಕ್ಷ ಉದಯಶಂಕರ್, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಎಲ್.ಎ.ಮಂಜುನಾಥ್, ಎಸ್.ಸಿ ಎಸ್.ಟಿ ಘಟಕದ ಜಿಲ್ಲಾದ್ಯಕ್ಷ ಜಯದೇವ, ಎಸ್.ಟಿ ಘಟಕದ ಜಿಲ್ಲಾದ್ಯಕ್ಷ ನಾಗರಾಜ್, ಮುಖಂಡ ಗಂಗಮ್ಮನಪಾಳ್ಯ ರಾಮಯ್ಯ ಮೊದಲಾದವರಿದ್ದರು.

ಸ್ಯಾಂಟ್ರೋ ರವಿಗೂ ಆರಗ ಜ್ಞಾನೇಂದ್ರಗೂ ಏನ್ ಸಂಬಂಧ ಗೊತ್ತಾ…?! ಈ ಬಗ್ಗೆ ಏನಂದ್ರು ಗೃಹ ಸಚಿವರು..?!

“ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! ರಾಜಕೀಯ ಹೈಡ್ರಾಮಾಕ್ಕೆ ಜನಸಾಮಾನ್ಯರ ಪ್ರಶ್ನೆ..?!

ಕರ್ನಾಟಕದ ಸಂಸ್ಕೃತಿಯನ್ನು ನಿರ್ಲಕ್ಷಿಸಿತಾ ಸರಕಾರ..?

- Advertisement -

Latest Posts

Don't Miss