ಈ ಫೋಟೋಗಳನ್ನು ನೋಡಿದ್ರೆ ಸಾಕು.. ಎಷ್ಟು ಸುಂದರ ಕುಟುಂಬ ಅಲ್ವಾ ಅಂತ ಅನ್ನಿಸದೇ ಇರೋದಿಲ್ಲ.. ಈ ಫೋಟೋದಲ್ಲಿರುವ ಮಹಿಳೆಯನ್ನು ನೋಡಿದ್ರೆ, ಯಾವ ಹೀರೋಯಿನ್ಗೂ ಕಡಿಮೆಯಿಲ್ಲ ಅನ್ಸುತ್ತೆ.. ಪತಿ ಕಾನ್ಸ್ಟೇಬಲ್.. ಈ ಸುಂದರ ಜೋಡಿಗೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು.. ಸಾಕು ಅಲ್ವಾ.. ಒಂದು ಕುಟುಂಬ ಖುಷಿಯಾಗಿರಲು ಇನ್ನೇನು ಬೇಕು ಹೇಳಿ..
ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿ ಬರೋಬ್ಬರು 17 ವರ್ಷಗಳಾಗಿತ್ತು. ಆದ್ರೆ, ಸೋಮವಾರ ಬೆಳಗ್ಗೆ ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿರೋ ಲೋಕನಾಥ್ ಪತ್ನಿಯ ಪ್ರಾಣವನ್ನೇ ತೆಗೆದಿದ್ದಾನೆ. ಅದ್ಯಾವ ಮಟ್ಟಿಗೆ ಅಂದ್ರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲೇ ಪತ್ನಿಗೆ ಮನಬಂದಂತೆ ಚಾಕು ಇರಿದು, ಬೀಭತ್ಸವಾಗಿ ಕೊಲೆಗೈದಿದ್ದಾನೆ..
ಕಾನ್‌ಸ್ಟೆಬಲ್ ಲೋಕನಾಥ್ ಅವರ ಪತ್ನಿ ಮಮತಾ, ಪತಿಯಿಂದಲೇ ಕೊಲೆಯಾದ ಮಹಿಳೆ. ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಇಂದು ಪತಿ ವಿರುದ್ಧ ಮಮತಾ ದೂರು ನೀಡಲು ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಸಿಟ್ಟಿಗೆದ್ದ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದಿದ್ದಾನೆ.
ಮಮತಾ ಅವರನ್ನು ಚಾಕುವಿನಿಂದ ಇರಿದಿದ್ದನ್ನು ಕಂಡ ಪೊಲೀಸರು, ತಕ್ಷಣವೇ ಹಿಮ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣಬಿಟ್ಟಿದ್ದಾರೆ. ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿದ್ದು, ಆಸ್ತಿ ಜಗಳಕ್ಕೆ ಇಬ್ಬರ ನಡುವೆ ಬೆಳಗ್ಗೆ ಗಲಾಟೆ ನಡೆದಿದೆ. ಮಮತಾ ಅವರು ಎಸ್ಪಿ ಕಚೇರಿ ದೂರು ನೀಡಲು ಬಂದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ..
ಹಾಸನ ಹೊರ ವಲಯದ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗೂ ಕೆ.ಆರ್ ಪುರಂನ ಲೋಕನಾಥ್, 2007ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು.. ಇಬ್ಬರದ್ದು ಅಂತಾರ್ಜತಿ ವಿವಾಹ ಅಂತಾ ಹೇಳಲಾಗುತ್ತಿದೆ. ಮದುವೆಯಾದ ಆರಂಭದ ದಿನದಿಂದಲೂ ಆರೋಪಿ ಲೋಕನಾಥ್, ಮಮತಾಗೆ ಕಿರುಕುಳ ಕೊಡಲು ಆರಂಭಿಸಿದ್ದನಂತೆ.. ಆಸ್ತಿ, ಸೈಟ್ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ ಅಂತಾ ಮಮತಾ ತಂದೆ ಶಾಮಣ್ಣ ಆರೋಪಿಸಿದ್ದಾರೆ..
ಈ ಲೋಕನಾಥ್ ಮಮತಾಗೆ ಅದ್ಯಾವ ಮಟ್ಟಿಗೆ ಹಣಕ್ಕಾಗಿ ಕಾಟಕೊಡ್ತಿದ್ದ ಅಂದ್ರೆ, ಬರೋಬ್ಬರಿ ಅರ್ಧ ಕೆಜಿ ಬಂಗಾರ, ಕೇಳಿದಾಗಲೆಲ್ಲ ಹಣ ಕೊಟ್ರೂ ಮತ್ತೆ ಮತ್ತೆ ಪೀಡಿಸುತ್ತಿದ್ದನ್ನಂತೆ.. ಕಳೆದ 15 ದಿನಗಳ ಹಿಂದೆಯಷ್ಟೇ ಮಮತಾ ಮೇಲೆ ಲೋಕನಾಥ್ ದೈಹಿಕವಾಗಿ ಹಲ್ಲೆ ಮಾಡಿದ್ದ.. ಕುತ್ತಿಗೆ ಬಾಗದಲ್ಲಿ ಸಾಕಷ್ಟು ಗಾಯಗಳು ಆಗಿವೆಯಂತೆ.. ಪಾಪಿ ಗಂಡ ಅದೆಷ್ಟೇ ಸಾಕಷ್ಟು ಕಿರುಕುಳ ಕೊಟ್ಟರೂ ಮಮತಾ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದಳಂತೆ..
ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಂದ್ರೂ, ಮರ್ಯಾದೆಗಂಜಿ ಸುಮ್ಮನಾಗಿದ್ದಳು. ಆದ್ರೆ, ಕಳೆದ ಮೂರು ದಿನಗಳಿಂದ ಏನಾಯ್ತೋ ಗೊತ್ತಿಲ್ಲ.. ಇಂದು ಮಗಳನ್ನು ಬರ್ಬರವಾಗಿ ಕೊಂದಿದ್ದಾನೆ. ಮಮತಾ ಪತಿ ಮಾತ್ರ ಕಿರುಕುಳ ಕೊಟ್ಟಿಲ್ಲ. ಆತನ ಪೋಷಕರು ಕೂಡ ಮಾನಸಿಕ ಹಿಂಸೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಗಳನ್ನು ಕೊಂದಿರೋ ಕೊಲೆಗಾರ ಗಂಡ ಹಾಗೂ ಪೋಷಕರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ತಂದೆ ಶಾಮಣ್ಣ ಆಗ್ರಹಿಸಿದ್ದಾರೆ.. ಇನ್ನೂ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಶವಾಗಾರದ ಬಳಿ ಮುಗಿಲು ಮುಟ್ಟಿದೆ.