- Advertisement -
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ವಿಕಿಪೀಡಿಯದಲ್ಲಿ ಪೇಜ್ ಓಪನ್ ಆಗಿದೆ. ಸ್ವತಃ ವಿಕಿಪೀಡಿಯ ಈ ಪೇಜ್ ಓಪನ್ ಮಾಡಿದೆ.
ರಾಜ್ಯ ಸೇರಿದಂತೆ ದೇಶವ್ಯಾಪಿ ಸಂಚಲನ ಮೂಡಿಸಿದ ಪ್ರಕರಣ ಇದಾಗಿರುವ ಕಾರಣ ವಿಕಿಪೀಡಿಯದಲ್ಲಿ Murder of Renukaswamy ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪೇಜ್ ತೆರೆಯಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲಿನಲ್ಲಿದ್ದಾರೆ.
ಜೂನ್ 21ಕ್ಕೆ ಈ ಪೇಜ್ ಓಪನ್ ಆಗಿದ್ದು ಹಲವು ವಿಕಿಪೀಡಿಯ ಸದಸ್ಯರು ಸೇರಿ ಈ ಕೊಲೆಯ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿ ನಿರಂತರವಾಗಿ ಅಪ್‌ಡೇಟ್ ಮಾಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಮಹತ್ವದ ವಿಷಯಕ್ಕೆ ಮಾಧ್ಯಮ ವರದಿಗಳ ಉಲ್ಲೇಖಗಳನ್ನು ಕೆಳ ಭಾಗದಲ್ಲಿ ನೀಡಲಾಗಿದೆ.
- Advertisement -