Sunday, September 8, 2024

Latest Posts

‘ಮೈಷುಗರ್ ಜೊತೆ ನಿರಾಣಿ ಶುಗರ್ಸ್ ಹೆಸರು ತಳುಕು ಹಾಕುವುದು ಬೇಡ’

- Advertisement -

ಮೈಷುಗರ್ ಕಾರ್ಖಾನೆ ಜೊತೆ ನಿರಾಣಿ ಶುಗರ್ಸ್ ಹೆಸರು ತಳುಕು ಹಾಕುವುದು ಬೇಡ ಎಂದು ಮನವಿ ಮಾಡಿ ಮುರುಗೇಶ್ ನಿರಾಣಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಮೈಷುಗರ್ ಖಾಸಗೀಕರಣ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಮೈಷುಗರ್ ಕಾರ್ಖಾನೆ ಜೊತೆ ನನ್ನ ಹೆಸರು ತಳುಕುಹಾಕುವುದು ಬೇಡ. ಮೈಷುಗರ್ ಕಾರ್ಖಾನೆಯನ್ನು ಖಾಸಗೀಯವರಿಗೆ ನೀಡುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ. ಹೀಗಿರುವಾಗ ಕಾರ್ಖಾನೆ ಗುತ್ತಿಗೆ ಪಡೆಯಲು ನಾನು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

https://youtu.be/3LN-eJ4i2Iw

ಅಲ್ಲದೇ, ರಾಜ್ಯ ಸರ್ಕಾರ ಬೇಕಾದವರಿಗೆ ಮೈಷುಗರ್ ನೀಡಲು ಅದು ಕಿರಾಣಿ ಅಂಗಡಿ ಅಲ್ಲ. ಯಾವುದೇ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಬೇಕಾದೆ. ಪಾರದರ್ಶಕ ನಿಯಮಗಳಡಿ ಸರ್ಕಾರ ಟೆಂಡರ್ ಕರೆಯಬೇಕು. ನಿಯಮಗಳಡಿ ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆ ಆಧರಿಸಿ ಗುತ್ತಿಗೆ ನೀಡಲಾಗುತ್ತದೆ. ಈ ಸಾಮಾನ್ಯ ಮಾಹಿತಿ ಇಲ್ಲದವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ವಿನಾಕಾರಣ ನಿರಾಧಾರ ಆರೋಪ ಮಾಡಿದ್ರೆ ಕಾನೂನು ಹೋರಾಟ ಮಾಡುವುದಾಗಿ ನಿರಾಣಿ ಎಚ್ಚರಿಕೆ ನೀಡಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,

ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss