Tuesday, August 5, 2025

Latest Posts

ಮುರುಘಾ ಮಠದಲ್ಲಿ ನೀರವ ಮೌನ…! ಆತಂಕದಲ್ಲಿ ವಿದ್ಯಾರ್ಥಿಗಳು:

- Advertisement -

Chithradurga News:

ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ಆರೋಪದ ಹಿನ್ನಲೆ ಮುರುಘ ಮಠದ ಶ್ರೀಗಳನ್ನು ಪೊಲೀಸ್  ಕಸ್ಟಡಿಗೆ ನೀಡಲಾಗಿದೆ. ಇನ್ನು  ಅರೆಸ್ಟ್ ಆಗಿರೋ ಶ್ರೀಗಳನ್ನು ವಿಚಾರಣೆ ಕೂಡಾ ನಡೆಯುತ್ತಿವೆ. ಡಿವೈಎಸ್ ಪಿ ಕಛೇರಿಯಲ್ಲಿಯೇ ಇರುವ  ಶ್ರೀಗಳಿಗೆ ಪೊಲೀಸರು  ಪ್ರಶ್ನೆಗಳ ಸುರಿಮಳೆಯನ್ನೇ ಕೇಳುತ್ತಿದ್ದಾರೆ. ಪ್ರತಿಯೊಂದು ಪ್ರಶ್ನೆಗಳಿಗೂ ಶ್ರೀಗಳು ಮಾತ್ರ ತುಟಿ ಬಿಚ್ಚುತ್ತಿಲ್ಲ. ಏನೆ ಪ್ರಶ್ನೆ ಕೇಳಿದರೂ  ಶ್ರೀಗಳು  ಮೌನ ತಾಳಿದ್ದಾರೆ. ಈ ಕಾರಣದಿಂದಾಗಿ ಪೊಲೀಸರಿಗೆ  ವಿಚಾರಣೆ ದೊಡ್ಡ ಸವಾಲಾಗಿ  ನಿಂತಿವೆ. ಡಿವೈಎಸ್ ಪಿ  ಅನಿಲ್ ಕುಮಾರ್  ಹಾಗು ಎಸ್ ಪಿ ಪರಶುರಾಮ್  ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. 2 ಗಂಟೆಗಳ ವರೆಗೆ ವಿಚಾರಣೆಗೆ ಒಳಪಡಿಸಲಾಗಿತ್ತು. ಶ್ರೀಗಳಿಗೆ  ಆಹಾರವನ್ನು  ನೀಡಲಾಗಿತ್ತು. ಆಹಾರದಲ್ಲಿ ಶ್ರೀಗಳಿಗೆ  ದೋಸೆ ಮತ್ತು ಹಣ್ಣುಗಳನ್ನು ನೀಡಲಾಗಿದೆ. ಶ್ರೀಗಳು ದೋಸೆ ಹಾಗು ಹಣ್ಣುಗಳಲ್ಲಿ ಪಪ್ಪಾಯವನ್ನು  ತಿಂದಿದ್ದಾರೆ. ನಿರಂತರ ವಿಚಾರಣೆಯ ನಂತರ  ಶ್ರೀಗಳು ಡಿವೈಎಸ್ ಪಿ ಕಛೇರಿಯಲ್ಲೇ  ಗಾಢ ನಿದ್ರೆಗೆ ಜಾರಿದ್ದಾರೆ. ಮೆತ್ತನೆ ಹಾಸಿಗೆ ಮೇಲೆ ಮಲಗುತ್ತಿದ್ದ ಶ್ರೀಗಳು ಕಸ್ಟಡಿಯಲ್ಲಿ ಚಾಪೆಯಲ್ಲಿ ಮಲಗಿದ್ದಾರೆ.

ಇತ್ತ  ಮುರುಘಾ  ಮಠ ನೀರವ ಮೌನವಾಗಿದೆ. ದಿನನಿತ್ಯ 200 ರಿಂದ 300  ಭಕ್ತಾಧಿಗಳಿಂದ  ತುಂಬಿ ತುಳುಕುತ್ತಿದ್ದ ಮಠ ಇದೀಗ ಬಿಕೋ  ಎನ್ನುತ್ತಿದೆ.  ಒಂದೆಡೆ ಮುರುಘ ಶ್ರೀಗಳು ಜೈಲುವಾಸ ಅನುಭವಿಸುತ್ತಿರುವುದರಿಂದ ದೇವರೆ ಇಲ್ಲದೆ ಮಠದಲ್ಲಿ ಪೂಜೆ  ಮಾಡಲ್ಲ  ಎಂಬುವುದಾಗಿ ಮಠದ ಸಿಬ್ಬಂದಿ  ಹೇಳುತ್ತಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ಏನು ಎಂದು  ಆತಂಕದಲ್ಲಿದ್ದಾರೆ. ಮತ್ತೊಂದು ಕಡೆ ನಿತ್ಯ ಭಕ್ತಿ  ಭಜನೆಗಳಿಂದ ತುಂಬಿರುತ್ತಿದ್ದ ಮಠದ ಆವರಣ ನಿಶಬ್ಧವಾಗಿದೆ. ಮಠದ ಭಕ್ತಾಧಿಗಳಿಗೆ ಇದು ಬೇಸರ ನೀಡುತ್ತಿದೆ.

ರಾತ್ರಿ ಚಾಪೆ ಮೇಲೆ ಮಲಗಿದ ಶ್ರೀಗಳು…! ವಿಚಾರಣೆ ಬಳಿಕ ಗಾಢ ನಿದ್ರೆಗೆ ಜಾರಿದ ಶ್ರೀಗಳು

ಪೊಲಿಸರಿಂದ ಪ್ರಶ್ನೆಗಳ ಸುರಿಮಳೆ..! ಶ್ರೀಗಳಿಗೆ ಯಾವ್ಯಾವ ಪ್ರಶ್ನೆ ಕೇಳಲಾಗುತ್ತಿದೆ ಗೊತ್ತಾ..?!

ಉತ್ತರ ನೀಡಲು ಶ್ರೀಗಳು ಹಿಂದೇಟು…! ಪೊಲಿಸರಿಗೆ ಸವಾಲಾಗಿದೆ ಶ್ರೀಗಳ ವಿಚಾರಣೆ..!

- Advertisement -

Latest Posts

Don't Miss