Chithradurga News:
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪೋಕ್ಸೋ ಕೇಸ್ ನಡಿ 3 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ನಿರಂತರ ಪ್ರಶ್ನೆಗಳ ಸುರಿಮಳೆಯಿಂದ ವಿ ಚಾರಣೆ ಕೂಡಾ ನಡೆಸಲಾಯಿತು. ಪುರುಷತ್ವ ಪರೀಕ್ಷೆ ಜೊತೆಗೆ ಕೂದಲು ಉಗುರು ರಕ್ತ ಸ್ಯಾಂಪಲ್ ಗಳನ್ನು ಎಫ್ ಎಸ್ ಎಲ್ ಗೂ ಕಳುಹಿಸಲಾಯಿತು. ತದನಂತರ ಶ್ರೀಗಳನ್ನು ನ್ಯಾಯಾಂಗದ ಮುಂದೆ ಹಾಜರು ಪಡಿಸಲಾಯಿತು. ಇದೀಗ ವಿಚಾರಣೆಯ ನಂತರ ಚಿತ್ರದುರ್ಗದ ಎರಡನೇ ಅಪರ ಸತ್ರ ನ್ಯಾಯಲಯದ ನ್ಯಾಯಾಧೀಶರಾದ ಕೋಮಲರವರು 9 ದಿನಗಳ ಕಾಲ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ. ಮತ್ತೆ ಪೊಲೀಸ್ ಕಸ್ಟಡಿಗೆ ಕೇಳದ ಹಿನ್ನಲೆ ಅವರನ್ನು ಕಾರಾಗೃಹದಲ್ಲಿಡುವಂತೆ ಆದೇಶಿಸಲಾಯಿತು. ಈ ಕಾರಣದಿಂದ ಸೆಪ್ಟೆಂಬರ್ 14 ರ ವರೆಗೆ ಶ್ರೀ ಗಳಿಗೆ ಜೈಲೇ ಗತಿ ಎಂದು ತಿಳಿದು ಬಂದಿದೆ. ಚಿತ್ರದುರ್ಗ ಕಾರಾಗೃಹದ ಆವರಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಟಿ.ಕೆ ಹಳ್ಳಿ ಯಂತ್ರಗಾರ ಜಲಾವೃತ: ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ
ರೈತರೇ ಗಮನಿಸಿ: ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಪ್ರಕ್ರಿಯೆ ಪ್ರಾರಂಭ