ಬೆಳ್ಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ಮುಸ್ಲೀಂ ಮುಖಂಡರು ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷವು ರಾಜ್ಯ ಸರ್ಕಾರದ ಧ್ವನಿ ವರ್ಧಕ ಮಾರ್ಗಸೂಚಿ ಆದೇಶದಿಂದ ತಣ್ಣಗಾಗಿದೆ. ಈ ಬಳಿಕ ಇಂದು ಮುಸ್ಲೀಂ ಮುಖಂಡರು ಸಭೆ ನಡೆಸಿ, ರಾಜ್ಯ ಸರ್ಕಾರ ಮಾರ್ಗಸೂಚಿ ಅನುಸರಿಸೋ ನಿಟ್ಟಿನಲ್ಲಿ, ಇನ್ಮುಂದೆ ಬೆಳಿಗ್ಗೆ 5 ಗಂಟೆಗೆ ಆಜಾನ್ ಕೂಗದೇ ಇರೋದಕ್ಕೆ ನಿರ್ಧರಿಸಲಾಗಿದೆ.

ಈ ಬಗ್ಗೆ ಸಭೆಯ ಬಳಿಕ ಮುಸ್ಲೀಂ ಮುಖಂಡರು ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರದ ಧ್ವನಿ ವರ್ಧಕ ಮಾರ್ಗಸೂಚಿ ಪಾಲನೆಗೆ ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಬೆಳಿಗ್ಗೆ 5 ಗಂಟೆಯ ವೇಳೆ ಕೂಗಲಾಗುತ್ತಿದ್ದಂತ ಆಜಾನ್ ನಿಲ್ಲಿಸಲು ನಿರ್ಧಿರಸಿಲಾಗಿದೆ. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ಬೆಳಿಗ್ಗೆ 6 ಗಂಟೆಯ ನಂತ್ರ ಆಜಾನ್ ಕೂಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂದಹಾಗೇ ರಾಜ್ಯ ಸರ್ಕಾರ ಧ್ವನಿ ವರ್ಧಕ ಬಳಕೆ ಬಗ್ಗೆ, ಅನಧಿಕೃತ ಧ್ವನಿ ವರ್ಧಕಗಳಿಗೆ ಅನುಮತಿ ಪಡೆಯುವಂತೆ ಮಾರ್ಗಸೂಚಿ ಕ್ರಮ ಪ್ರಕಟಿಸಿತ್ತು. ಅಲ್ಲದೇ ಇಂತಿಷ್ಟು ಧ್ವನಿಯನ್ನು ಯಾವ್ ಯಾವ್ ಸಂದರ್ಭದಲ್ಲಿ ಹೊರಡಿಸುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಅಲ್ಲದೇ ಬೆಳಿಗ್ಗೆ 5 ಗಂಟೆಯ ವೇಳೆಯ ಧ್ವನಿ ವರ್ಧಕದ ಡೆಸಿಬಲ್ ಅತ್ಯಂತ ಕಡಿಮೆ ಇರಬೇಕು ಎಂಬುದಾಗಿ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ, ಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ಮುಸ್ಲೀಂ ಮುಖಂಡರು ನಿರ್ಧರಿಸಿದ್ದಾರೆ.

About The Author