Saturday, April 19, 2025

Latest Posts

Ganesh Fest : ಧರ್ಮ ದಂಗಲ್ ಮಧ್ಯೆ ಮುಸ್ಲಿಂ ಸರಕಾರಿ ನೌಕರನ ಸೌಹಾರ್ಧತೆ ಸಾರುವ ಕಥನ

- Advertisement -

Belagavi News : ಇತ್ತೀಚಿನ ದಿನಗಳಲ್ಲಿ ಧರ್ಮ ದಂಗಲ್ ಮಧ್ಯೆ ಈ ಗ್ರಾಮದಲ್ಲೊಂದು ಕುಟುಂಬ ಕಳೆದ ಮೂರು ತಲೆಮಾರಿನಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ. ಮನೆಯ ತುಂಬೆಲ್ಲ ಝಗಮಗಿಸುತ್ತಿರುವ ಕಲರ್ಫುಲ್ ಗಣೇಶ ಮೂರ್ತಿಗಳು. ವಿಘ್ನನಿವಾರಕನ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಮುಸ್ಲಿಂ ಕುಟುಂಬ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ.

ಅಲ್ಹಾಭಕ್ಷ ಜಮಾದಾರ್ ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕರಾಗಿರುವ ಇವರು ವಂಶಪಾರಂಪರ್ಯವಾಗಿ ಬಂದಿರುವ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸುತ್ತಾ ಬಂದಿದ್ದಾರೆ.ಮಾಂಜರಿವಾಡಿ ಗ್ರಾಮದ ಜಮಾದಾರ್ ಕುಟುಂಬ ಕಳೆದ ಮೂರು ತಲೆಮಾರಿನಿಂದ ಈ ಕಾಯಕ ಮಾಡುತ್ತ ಬಂದಿದೆ. ಮಹಾರಾಷ್ಟ್ರದಿಂದ ಜೇಡಿಮಣ್ಣನ್ನು ತಂದು ಪರಿಸರ ಸ್ನೇಹಿ ಗಣಪನ ಸಿದ್ಧಪಡಿಸುತ್ತಾರೆ.

ಪ್ರತಿ ವರ್ಷ ಗಣೇಶ ಹಬ್ಬ ಬಂತಂದ್ರೆ ಮಾಂಜರಿವಾಡಿ, ಮಾಂಜರಿ, ಯಡೂರವಾಡಿಯಿಂದ ಜನ ಆಗಮಿಸಿ ಗಣೇಶನ ಮೂರ್ತಿ ತೆಗೆದುಕೊಂಡು ಹೋಗುತ್ತಾರೆ. ನಮ್ಮ ತಾತನ ಕಾಲದಿಂದಲೂ ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ನಮ್ಮ ಕುಟುಂಬ ಸದಸ್ಯರೆಲ್ಲರೂ ಸೇರಿ ಪ್ರತಿ ವರ್ಷ 150ರಿಂದ 200 ಗಣೇಶಮೂರ್ತಿ ತಯಾರು ಮಾಡುತ್ತೇವೆ ಅಂತಾರೆ.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್‌ಗೆ ಬೇಸರ ವ್ಯಕ್ತಪಡಿಸುವ ಅಲ್ಹಾಭಕ್ಷ ಜಮಾದಾರ್, ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ದೇಶ ನಮ್ಮದು. ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಅಣ್ಣತಮ್ಮಂದಿರಂತೆ ಇರ್ತೀವಿ. ಹಿಂದೂ ಮುಸ್ಲಿಂ ಅನ್ನೋದಕ್ಕಿಂತ ಮನುಷ್ಯ ಜಾತಿ ಮುಖ್ಯ ಎನ್ನುತ್ತಾರೆ. ಕೆಲವೊಂದಿಷ್ಟು ಕುಟುಂಬಗಳಿಗೆ ಸ್ವತಃ ಅಲ್ಹಾಭಕ್ಷ ಗಣೇಶ ಮೌರ್ತಿ ಮನೆ ಬಾಗಿಲಿಗೊಯ್ದು ಕೊಡುತ್ತಾರೆ. ಮಾಂಜರಿವಾಡಿಯ ಜಮಾದಾರ್ ಕುಟುಂಬ ಕಾರ್ಯಕ್ಕೆ ಇಡೀ ಊರಿಗೆ ಊರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

MB Pateel : ಯಾರೂ ಕಾನೂನಿಗಿಂತ ಮೇಲಲ್ಲ : ಸಚಿವ ಎಂ.ಬಿ ಪಾಟೀಲ್

Ganesha Fest : ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಕಲ ತಯಾರಿ

Police : ಮಗ ಪೋಲಿ ಅಮ್ಮ ಪೊಲೀಸ್ : ಮಗನ ಪುಂಡಾಟಿಕೆಗೆ ತಾಯಿ ಕುಮ್ಮಕ್ಕಿಗೆ ಎತ್ತಂಗಡಿ ಶಿಕ್ಷೆ

 

- Advertisement -

Latest Posts

Don't Miss