Saturday, December 21, 2024

Latest Posts

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಶಾಸಕ ..!

- Advertisement -

www.karnatakatv.net:ತುಮಕೂರು:  ಜಿಲ್ಲೆಯ  ಮಧುಗಿರಿ ಕ್ಷೇತ್ರದ ಶಾಸಕ ಎಂ.ವೀರಭದ್ರಯ್ಯ ಸದಾ ಸೌಮ್ಯ ಸ್ವಭಾವದ ಜನಪ್ರತಿನಿಧಿ. ತಮ್ಮ ಕ್ಷೇತ್ರದ ಚಿಕ್ಕದಾಳವಟ್ಟ ಗ್ರಾಮದಲ್ಲಿ ಸುಮಾರು 21 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆ ಆರಂಭವಾಗಲಿದೆ. ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆಗೆ ಅವರು ಭಾಗವಹಿಸಿದ್ದರು. 

ಈ ವೇಳೆ  ಐ.ಡಿ ಹಳ್ಳಿ ಮೂಲಕ ಮುದ್ದೇನಹಳ್ಳಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಕೇಬಲ್ ಅಳವಡಿಸಲು ಗುಂಡಿ ಅಗೆಯುವ ದೃಶ್ಯ ನೋಡಿದ್ದಾರೆ. ಇದ್ರಿಂದ ಕೋಪಗೊಂಡ ಶಾಸಕರು, ರಸ್ತೆ ಹಾಳಾಗುತ್ತಿದೆ ಅಧಿಕಾರಿಗಳು ಏನ್ ಮಾಡುತ್ತಿದ್ದೀರಿ. 46 ಕೋಟಿ ವೆಚ್ಚದಲ್ಲಿ ಐ.ಡಿ ಹಳ್ಳಿ ಹಿಂದೂಪುರ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹುಡುಗಾಟ ಆಡಬೇಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಂ.ವಿ ವೀರಭದ್ರಯ್ಯ ತರಾಟಗೆ ತೆಗೆದುಕೊಂಡರು.

ಚಿಕ್ಕದಾಳವಾಟ ಸುತ್ತಮುತ್ತ ಸರ್ಕಾರಿ ಶಾಲೆಯಲ್ಲಿ ಕೇವಲ 8 ನೇ  ತರಗತಿ ವರೆಗೆ ಇದೆ. 9 ಮತ್ತು 10 ನೇ ತರಗತಿ ಓದಲು ವಿಧ್ಯಾರ್ಥಿಗಳು ದೂರ ಹೋಗಬೇಕು. ಒಂದು ಹೈಸ್ಕೋಲ್ ಮಂಜೂರು ಮಾಡಿಸಿಕೊಡುವಂತೆ ಸ್ಥಳೀಯರು ಬೇಡಿಕೆ ಶಾಸಕರ ಮುಂದಿಟಿದ್ರು . ಈ ಬಗ್ಗೆ ಸಚಿವರ ಬಳಿ ಮಾತನಾಡಿ ಮನವಿ ಮಾಡಿದ್ದನೆ. ಗಡಿಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ ಅನುದಾನದ ಕೊರತಯ ನಡುವೆಯೂ ಹಂತ ಹಂತವಾಗಿ ಅಭಿವೃದ್ಧಿ ಭರವಸೆ ನೀಡಿದರು. ಅಲ್ಲದೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.

ಕೊರೊನಾ ಅಬ್ಬರದ ನಡುವೆ ಅದೆಷ್ಟೋ ಕಾಮಗಾರಿಗಳು ನಿಂತೋ ಹೋಗಿತ್ತು. ಈಗ ಮತ್ತೆ ಕ್ಷೆತ್ರಗಳಲ್ಲಿ ಅಭಿವೃದ್ದಿ ಕೆಲಸಗಳು ಅರಂಭಗೊಂಡಿವೆ. ಇದರಿಂದ ಒಂದಷ್ಟು ಜನ ಪರ ಕೆಲಸಗಳು ನಡೆಯಲಿದೆ ಅನ್ನೋ ಖಷಿ ಜನರಲ್ಲಿ ಮನೆ ಮಾಡಿದೆ.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ –  ತುಮಕೂರು

- Advertisement -

Latest Posts

Don't Miss