Mysoor News
ಅದು ಎರಡು ಮುದ್ದಾದ ಮಕ್ಕಳಿದ್ದ ಸುಂದರ ಕುಟುಂಬ ಬಹುಷ ಆಕೆ ಒಬ್ಬಳು ಮನಸ್ಸು ಮಾಡಿದ್ರೆ ಫ್ಯಾಮಿಲಿ ಜೊತೆ ಸೊಗಸಾದ ಜೀವನ ನಡೆಸಬಹುದಿತ್ತು. ಆದರೆ ಆಕೆಯ ಆ ಒಂದು ಶೋಕಿ ಜೀವನವೇ ಸಂಸಾರವನ್ನೇ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಶೋಕಿ ಜೀವನಕ್ಕೆ ಗಂಡನನ್ನೇ ಮರೆತು ಮೆರೆಯುತ್ತಿದ್ದಳು…ಇಷ್ಟೇ ಆಗಿದ್ದರೆ ಖಂಡಿತಾ ನಾವು ಈ ಸ್ಟೋರಿ ಹೇಳ್ತಾನೆ ಇರ್ಲಿಲ್ಲ ಆದರೆ ಅಲ್ಲಿ ನಡೆದದ್ದೇ ಬೇರೆ ಆಕೆಯ ಆ ಒಂದು ನಿರ್ಧಾರಕ್ಕೆ ಊರಿಗೆ ಊರೇ ನೀರವ ಮೌನವಾಗಿದೆ.
.ತುಂಡು ಉಡುಗೆ… ಬೆಕ್ಕಿನ ನಡಿಗೆ..ಅಲಲಲ ಏನ್ ಚಂದ ಏನ್ ಆನಂದ ಇದೇ ಜೀವನ ಆಕೆಗೆ ಅಚ್ಚು ಮೆಚ್ಚು ನೋಡಿ… ಆದ್ರೆ ಅವಳ ಆ ಒಂದು ಸ್ವಾರ್ಥದ ಬದುಕಿಗೆ ಬಲಿಯಾಗಿದ್ದು ಮಾತ್ರ ಅಮಾಯಕ ಜೀವ..ಹೌದು ಎರಡು ಮಕ್ಕಳಿದ್ದ ಸುಂದರ ಕುಟುಂಬ ಅದು ಊರಿನ ಪಂಚಾಯತಿ ಜವಾಬ್ದಾರಿ ಹೊತ್ತಿದ್ದ ಸಾಂಪ್ರಾದಾಯಿಕ ಕುಟುಂಬವದು ಮಕ್ಕಳ ಲಾಲನೆ ಪಾಲನೆಯಲ್ಲಿ ಮನೆಯಲ್ಲಿ ಕೂತುಂಡು ಜೀವನ ನಡೆಸಬಹುದಾಗಿದ್ದ ಮಡದಿ ಮಾಡಿದ ಆ ಘನಂದಾರಿ ಕೆಲಸಕ್ಕೆ ಇಡೀ ಕುಟುಂಬವೇ ಕೈಚೆಲ್ಲಿ ಕೂತಿದೆ.
ಅವಳು ಫುಲ್ ಶೋಕಿವಾಲ ಹೊರಗಡೆ ಪಾರ್ಟಿ ಮನೆಯಲ್ಲಿ ಜಟಾಪಟಿ…ಅವಳಿಗೆ ಊರು ಸುತ್ತಾಟದ ಚಟವಾದ್ರೆ ಗಂಡನಿಗೆ ಮನೆ ಮರ್ಯಾದೆ ಉಳಿಸೋ ಸಂಕಟ…ಇಬ್ಬರು ವಿರುದ್ಧ ಪಥದಲ್ಲೇ ಸಂಸಾರ ಸಾಗಿಸುತ್ತಿದ್ದರು. ಆದರೆ ಈಗ ಸಂಸಾರದ ಈ ಆಟ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಜೋಡಿ ಮಂಜುನಾಥ್ ಹಾಗೂ ನಿಖಿತಾ ಮೈಸೂರಿನ ಹೂಟಗಳ್ಳಿ ನಿವಾಸಿಗಳು. ನಿಖಿತಾ ಮೈಸೂರಿನ ಬೋಗಾದಿ ನಿವಾಸಿ. 10 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಎರಡು ಮುದ್ದಾದ ಮಕ್ಕಳಿದ್ದಾರೆ. ಇಬ್ಬರೂ ಮದುವೆಯಾದ ಒಂದು ವರ್ಷ ಚೆನ್ನಾಗಿಯೇ ಇದ್ದರು. ಆದ್ರೆ ಒಂದು ವರ್ಷದ ನಂತರ ಇಬ್ಬರ ನಡುವೆ ಬಿರುಕು ಶುರುವಾಯ್ತು.. ಇದಕ್ಕೆ ಕಾರಣ ಆಗಿದ್ದೇ ನಿಖಿತಾ ಶೋಕಿ ಜೀವನ.
ಹೌದು ಮಂಜುನಾಥ್ ಅವರದ್ದು ಸಂಪ್ರದಾಯಸ್ಥ ಕುಟುಂಬ. ತುಂಬಿದ ಕುಟುಂಬ. ಊರ ಯಜಮಾನಿಕೆ ಜವಾಬ್ದಾರಿ ಹೊತ್ತಿದ್ದವರು. ಆದ್ರೆ ನಿಖಿತಾಗೆ ಇದ್ಯಾವುದೂ ಲೆಕ್ಕಕ್ಕೆ ಇರಲಿಲ್ಲ. ಯಾವಾಗಲೂ ಮಾಡ್ರನ್ ಡ್ರೆಸ್ ಹಾಕೋದು ಲೇಟ್ ನೈಟ್ ಪಾರ್ಟಿ ಮಾಡೋದು ಹವ್ಯಾಸ. ಇದರ ಜೊತೆಗೆ ಬೇರೆಯವರ ಜೊತೆ ಸಂಬಂಧ ಸಹಾ ಇಟ್ಟುಕೊಂಡಿದ್ದಳಂತೆ ಈ ಐನಾತಿ ಚೆಲುವೆ. 6 ವರ್ಷಗಳ ಹಿಂದೆ ನಿಖಿತಾ ಯಾರದೋ ಜೊತೆ ರಾಯಚೂರಿಗೆ ಓಡಿ ಹೋಗಿದ್ದರಂತೆ ಎಂಬುದು ಮೃತ ಮಂಜುನಾಥ್ ಅತ್ತಿಗೆ ಸರಸ್ವತಿ ಅವರ ಮಾತು ಕೂಡಾ.ಕೊನೆಗೆ ಆಕೆಯನ್ನು ಹುಡುಕಿ ಕರೆದುಕೊಂಡು ಬಂದು ರಾಜಿ ಪಂಚಾಯತಿ ಮಾಡಿ ಸಂಸಾರ ಸರಿ ಮಾಡಲಾಗಿತ್ತಂತೆ. ವಾಪಸ್ಸು ಬಂದ ಮೇಲೂ ನಿಖಿತಾ ಮಾತ್ರ ಬದಲಾಗಿರಲಿಲ್ಲವಂತೆ. ಅದೇ ಕೊರಗಲ್ಲಿ ಮಂಜುನಾಥ್ ತಂದೆ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದು ಸಾವನ್ನಪ್ಪಿದ್ದರೆಂದು ಊರವರು ಹೇಳೋದು.
ಇಷ್ಟಾಗಿದ್ದರೂ ಗಂಡ ಮಾತ್ರ ಹೆಂಡತಿ ಇಂದಲ್ಲಾ ನಾಳೆ ಸರಿ ಹೋಗುತ್ತಾಳೆ ಎಂದು ಕಾದು ಕುಳಿತಿದ್ದ. ಆದರೆ ಆಕೆ ಮಾತ್ರ ಗಂಡನನ್ನೇ ಪರಲೋಕಕ್ಕೆ ಕಳುಹಿಸೋ ಯೋಚನೆಯಲ್ಲಿದ್ದಳು. ತನ್ನ ಲೈಫ್ ಸ್ಟೈಲ್ ಗೆ ಗಂಡನೇ ವಿಲನ್ ಎಂದು ಭಾವಿಸಿ ಆಕೆಯ ಆಟ ಶುರು ಮಾಡಿದ್ದಳು.
ಅದು ಮಂಗಳವಾರ ತಡರಾತ್ರಿ ಮಂಜುನಾಥ್ ಸಹೋದರಿಯರಿಗೆ ಕರೆ ಮಾಡಿದ ನಿಖಿತಾ ನಿಮ್ಮ ತಮ್ಮ ಜ್ಞಾನ ತಪ್ಪಿದ್ದಾರೆ ಅಂತಾ ಹೇಳ್ತಾಳೆ. ಸೋದರನಿಗೆ ಏನಾಗಿದೆ ಎಂದು ಸೋದರಿಯರು ಬರುವಷ್ಟರಲ್ಲೇ ಮಂಜುನಾಥ್ ಮಂಜುನಾಥ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅದಾಲೇ ಮನೆಯವರಿಗೆ ಆಕೆಯ ಆಟ ಗೊತ್ತಾಗಿ ಬಿಡುತ್ತೆ ಅವಳೇ ಕೊಲೆ ಮಾಡಿದ್ದಾಳೆ ಎಂದು ಅವರು ಆರೋಪವನ್ನು ಮಾಡುತ್ತಾರೆ.
ಮಂಜುನಾಥ್ ಮಾತ್ರವಲ್ಲ ಅವರ ತಂದೆ ತಾಯಿಯನ್ನೂ ನಿಖಿತಾಳೆ ಕೊಲೆ ಮಾಡಿದ್ದಾಳೆ ಅನ್ನೋದು ಮಂಜುನಾಥ್ ಮನೆಯವರ ಮತ್ತೊಂದು ಆರೋಪ. ಸದ್ಯ ಈ ಐನಾತಿ ನಿಖಿತಾಳನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅದೇನೇ ಇರಲಿ ಆಕೆಯ ಶೋಕಿ ಜೀವನವೇ ಮುಖ್ಯ ಆಗಿದ್ದಲ್ಲಿ ಸ್ವತಂತ್ರ ಜೀವನ ನಡೆಸಬಹುದಿತ್ತು ಆದರೆ ಕಟ್ಟಿಕೊಂಡ ಗಂಡನನ್ನೇ ಕೊಲೆ ಮಾಡೋದು ಇದೆಂತಾ ಪರಿಹಾರ… ಇವಳಿಗೆ ಗಂಡ ಬೇಡವಾಗಿತ್ತು ನಿಜ ಆದರೆ ಆ ಮುಗ್ಧ ಮಕ್ಕಳ ಪಾಲಿನ ಪ್ರೀತಿಯ ತಂದೆಯನ್ನು ದೂರ ಮಾಡಿದಳೇಕೆ…ಇದು ಎಂತಾ ಬದುಕು..?!
ಒಟ್ಟಾರೆ ಮಾಡರ್ನ್ ಜಗತ್ತಿಗೆ ಮಾರುಹೋಗುವ ಮುನ್ನ ಒಮ್ಮೆ ಯೋಚಿಸಿ ಜೀವಕ್ಕಿಂತ ಶೋಕಿ ಜೀವನವೇನು ದೊಡ್ಡದಲ್ಲ..ಬಾಂಧವ್ಯಕ್ಕಿಂತ ಬೇಕಾಬಿಟ್ಟಿ ಜೀವನವೇ ಹಿರಿದಲ್ಲ….

