Friday, March 14, 2025

Latest Posts

ಮೈಸೂರು ದಸರಾ ಮಹೋತ್ಸವ: ಅರಮನೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

- Advertisement -

mysoor:

ವಿಶ್ವಪ್ರಸಿದ್ಧ ಮೈಸೂರು ದಸರಾ [mysoor dasara] ಆಚರಣೆಗೆ ಮುನ್ನುಡಿ ಬರೆದ ಹಿನ್ನಲೆಯಲ್ಲಿ ಜಂಬೂ ಸವಾರಿಯಲ್ಲಿ ಚಾಮುಂಡಿಯನ್ನು ಹೊತ್ತೊಯ್ಯುವ ಮತ್ತು ಅದರ ಹಿಂದೆ ಸಾಗುವ ಗಜಪಡೆಗಳಿಗೆ ಭಾನುವಾರ ಕಾಡಿನಿಂದ ಪೂಜೆ ಸಲ್ಲಿಸಿ ನಾಡಿನತ್ತ ಕಳುಹಿಸಲಾಗಿತ್ತು. ಗಜಪಡೆಗಳು ಬುಧವಾರ ಮೈಸೂರು ಪುರವನ್ನು ಪ್ರವೇಶಿಸಿದೆ.

ಮೈಸೂರು ಅರಮನೆ ಮುಂದೆ ಗಜಪಡೆಗಳಿಗೆ ಅದ್ದೂರಿ ಹಾಗು ಸಾಂಪ್ರದಾಯಿಕ ಸ್ವಾಗತ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಗಳನ್ನು ಸ್ವಾಗತಿಸಿದರು. ಅರಮನೆಯ ಆನೆಬಾಗಿಲಲ್ಲಿ ಸಚಿವರು ಗಜಪಡೆಗಳಿಗೆ ಅಂದರೆ ಅಂಬಾರಿ ಹೊರಲಿರುವ ಅಭಿಮನ್ಯು ಸೇರಿದಂತೆ 9 ಆನೆಗಳಿಗೆ ಪೂಜೆ ಸಲ್ಲಿಸಿ ನಂತರ ಕಾವಾಡಿಗರು ಮತ್ತು ಮಾವುತರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.

ಹಾಗೆಯೆ ಅರಮನೆ ಆವರಣದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು, ಭೀಮ, ಗೋಪಾಲಸ್ವಾಮಿ, ಅರ್ಜುನ, ಮಹೇಂದ್ರ,  ಧನಂಜಯ, ಕಾವೇರಿ, ಲಕ್ಷ್ಮಿ ಚೈತ್ರ  ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಲಾಯಿತು  ಎಂದು ಸಚಿವರು ತಿಳಿಸಿದರು.

ಪ್ರತಿದಿನ ದೀಪ ಹಚ್ಚುವಾಗ ಈ ವಿಷಯವನ್ನ ನೆನಪಿನಲ್ಲಿಡಿ..

- Advertisement -

Latest Posts

Don't Miss