ಮೈಸೂರು ದಸರಾ: ಹೌದು ಈ ಬಾರಿ ದಸರಾ ಹಬ್ಬದ ತಾಲೀಮಿನಲ್ಲಿ ಭಾಗಿಯಾಗುವ ಹೆಣ್ಣು ಆನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿದ ನಂತರ ದಸರಾ ತರಬೇತಿಗೆ ಕಳುಹಿಸಲಾಗುವುದು. ಏಕೆಂದರೆ ಕಳೆದ ಬಾರಿ ದಸರಾದಲ್ಲಿ ಗರ್ಭಿಣಿಯಾಗಿರುವ ಆನೆಯನ್ನುತರಬೇತಿ ನಿಡುವ ಮೂಲಕ ಮುಜುಗರಕ್ಕೆ ಈಡಾಗಿದ್ದ ಅರಣ್ಯ ಇಲಾಖೆ ಮತ್ತೊಮ್ಮೆ ಆ ತಪ್ಪು ಜರುಗುದಂತೆ ಕ್ರಮ ವಹಿಸಲಾಗಿದೆ .
ಸದ್ಯ ದಸರಾಗೆ ಬರುವ ಆನೆಗಳ ಬಗ್ಗೆ ಎಚ್ಚರ ವಹಿಸಿ ಈ ತಿಂಗಳ ಅಂತ್ಯಕ್ಕೆ ಆನೆಗಳ ಪಟ್ಟಿ ಸಿದ್ದಪಡಿಸಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ ಈ ಬಾರಿ ದಸರಾಗೆ 14 ಆನೆಗಳನ್ನು ಕರೆತರಲು ಯೋಜನೆಯನ್ನು ರೂಪಿಸಲಾಗಿದೆ.
ಆದರೆ ಈ ಬಾರಿ ಗೋಪಾಲಸ್ವಾಮಿ ಮತ್ತು ಅರ್ಜುನ ಹೆಸರಿನ ಆನೆಗಳು ದಸರಾದಲ್ಲಿ ಭಾಗವಹಿಸುದಿಲ್ಲ. ಗೋಪಾಲಸ್ವಾಮಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು ಅರ್ಜುನ ಆನೆಗೆ ವಯಸ್ಸಾಗಿದೆ ಹಾಗಾಗಿ ಈ ಬಾರಿ ದಸರಾಗೆ ಈ ಎರಡು ಆನೆಗಳು ಗೈರಾಗಲಿವೆ.ಈ ಬಾರಿಯ ದಸರಾ ಕ್ಯಾಪ್ಟನ್ ಅಭಿಮನ್ಯು ಹೆಸರಿನ ಆನೆಯ ನೇತೃತ್ವದಲ್ಲಿ ಜಂಬೂ ಸವಾರಿ ನಡೆಯಲಿದೆ.
Mamata Banerjee : “NDA ನೀವು ಭಾರತಕ್ಕೆ ಸವಾಲು ಹಾಕಬಹುದೇ..?! “: ಮಮತಾ ಬ್ಯಾನರ್ಜಿ
Arun Putthila : “ಸುಭದ್ರ ಭಾರತಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ”: ಪುತ್ತಿಲ
Tuition center: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದ ತಂದೆಗೆ ಹೃದಯಾಘಾತ