www.karnatakatv.net :ಮೈಸೂರು : ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಳೆದ 4 ದಿನಗಳಿಂದ ರಾಜ್ಯದ ಜನತೆಯ ಆಕ್ರೋಶದ ಕಿಚ್ಚಿಗೆ ಕಾರಣರಾಗಿದ್ದ ಕಾಮುಕರು ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ.
ಚಾಮುಂಡಿ ಬೆಟ್ಟದ ಲಲಿತಾದ್ರಿಪುರ ಬಳಿ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಅಂದರ್ ಆಗಿದ್ದಾರೆ. 85 ಗಂಟೆಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಕಡೆಗೂ ಕಾಮುಕರ ಹೆಡೆಮುರಿಕಟ್ಟಿದ್ದಾರೆ. ಇಂದು ಬೆಳಗ್ಗೆ ತಮಿಳುನಾಡಿನಿಂದ ಆರೋಪಿಗಳನ್ನು ತನಿಖಾ ತಂಡ ವಶಕ್ಕೆ ಪಡೆದು ರಾಜ್ಯಕ್ಕೆ ಕರೆತಂದಿದೆ. ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳು ಆರೋಪಿಗಳ ಪತ್ತೆಗೆ ಸುಳಿವು ನೀಡಿದ್ವು. ಸದ್ಯ ಆರೋಪಿಗಳ ವಿಚಾರಣೆ ನಡೆಸ್ತಿರೋ ಪೊಲೀಸರು ಘಟನೆ ಕುರಿತಂತೆ ಹೇಳಿಕೆ ಪಡೀತಿದ್ದಾರೆ.
ಆದ್ರೆ ಇತ್ತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತ ಯುವತಿ ತನ್ನ ಪೋಷಕರೊಂದಿಗೆ ಮುಂಬೈಗೆ ತೆರಳಿದ್ದಾಳೆ. ಪೊಲೀಸರಿಗೂ ಯಾವುದೇ ಮಾಹಿತಿ ನೀಡದೇ ಯುವತಿ ತೆರಳಿದ್ದು, ತನಿಖೆಗೆ ಆಕೆ ಸಹಕರಿಸ್ತಿಲ್ಲ ಅಂತ ಹೇಳಲಾಗ್ತಿದ್ದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಗುವಂತೆ ಭಾಸವಾಗ್ತಿದೆ.
ಕರ್ನಾಟಕ ಟಿವಿ- ಮೈಸೂರು